ಸಿರಿಯನ್ ಬಿಕ್ಕಟ್ಟು: ಅಂಕಾರದಲ್ಲಿ ತ್ರಿರಾಷ್ಟ್ರ ಶೃಂಗ

0
492

ಸನ್ಮಾರ್ಗ ವಾರ್ತೆ

ಅಂಕಾರ,ಸೆ.17: ಸಿರಿಯದ ಸಮಸ್ಯೆಯನ್ನು ಚರ್ಚಿಸಲು ಟರ್ಕಿ ಅಧ್ಯಕ್ಷ ರಜಬ್ ತಯ್ಯಿಬ್ ಉರ್ದುಗಾನ್ ಅಧ್ಯಕ್ಷತೆಯಲ್ಲಿ, ರಾಜಧಾನಿ ಅಂಕಾರದಲ್ಲಿ ತ್ರಿರಾಷ್ಟ್ರ ಶೃಂಗ ನಡೆಯಲಿದೆ. ರಷ್ಯದ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಇರಾನ್ ಅಧ್ಯಕ್ಷ ಹಸನ್ ರೂಹಾನಿ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.

ಶೃಂಗಕ್ಕಿಂತ ಮುಂಚೆ ಸೋಮವಾರ ಮೂರು ರಾಷ್ಟ್ರಗಳ ಮುಖ್ಯಸ್ಥರು ಬೇರೆ ಬೇರೆಯಾಗಿ ಚರ್ಚಿಸಿದರು. ಸಿರಿಯಾದ ಬಂಡುಕೋರರ ಕೊನೆಯ ಶಕ್ತಿಕೇಂದ್ರ ಇದ್ಲಿಬ್ ಮರು ವಶಕ್ಕೆ ಸಿರಿಯದ ಸೇನೆ ಯತ್ನಿಸುತ್ತಿದ್ದು ರಷ್ಯ ಬೆಂಬಲಿಸುತ್ತಿದೆ. ಈ ಪರಿಸ್ಥಿತಿಯಲ್ಲಿ ವಲಯದಲ್ಲಿ ಹೊಸ ಸಾಧ್ಯತೆಗಳನ್ನು ಶೃಂಗದಲ್ಲಿ ಚರ್ಚಿಸಲಾಗುವುದು.  ಸಿರಿಯದ ಅಧ್ಯಕ್ಷ ಬಶರುಲ್ ಅಸದ್‍ರನ್ನು ರಷ್ಯ, ಇರಾನ್ ಬೆಂಬಲಿಸುತ್ತಿವೆ.

ಆದರೆ ಕೆಲವು ಸಿರಿಯನ್ ಬಂಡುಕೋರರ ತಂಡಗಳನ್ನು ಟರ್ಕಿ ಬೆಂಬಲಿಸುತ್ತಿದೆ. ಸಿರಿಯದ ಬಶರುಲ್ ಅಸದ್‍ರ ಸ್ಥಿತಿ ಹೆಚ್ಚು ಗಟ್ಟಿಯಾಗುತ್ತಿದ್ದು, ಈ ಪರಿಸ್ಥಿತಿಯಲ್ಲಿ ಇದ್‍ಲಿಬ್‍ನಿಂದ ಟರ್ಕಿಗೆ ಭಾರೀ ಪ್ರಮಾಣದಲ್ಲಿ ನಿರಾಶ್ರಿತರ ತಂಡಗಳು ಹರಿದು ಬರುವ ಸಾಧ್ಯತೆಯಿದ್ದು ಇದನ್ನಹ ತಡೆಯುವ ಶ್ರಮಗಳನ್ನು ಟರ್ಕಿ ಆರಂಭಿಸಿದೆ ಎನ್ನಲಾಗಿದೆ. 2017ರಲ್ಲಿ ಘರ್ಷಣೆ ಆರಂಭಗೊಂಡ ಬಳಿಕ ನಡೆಯುತ್ತಿರುಚ ಐದನೆಯ ಸಮಾಲೋಚನೆ ಇದಾಗಿದೆ.