ಸನ್ಮಾರ್ಗ ವಾರ್ತೆ
ಯಾಂಗೂನ್,ಸೆ.17: ಮ್ಯಾನ್ಮಾರಿನಲ್ಲಿರುವ ಆರು ಲಕ್ಷ ರೋಹಿಂಗ್ಯನ್ ಮುಸ್ಲಿಮರು ಗಂಭೀರ ಜನಾಂಗೀಯ ಹತ್ಯೆಯ ಬೆದರಿಕೆಯನ್ನು ಎದುರಿಸುತ್ತಿದ್ದಾರೆ ಎಂದು ವಿಶ್ವಸಂಸ್ಥೆಯ ತನಿಖಾ ತಂಡ ತಿಳಿಸಿದೆ. ದೇಶದಿಂದ ಪಲಾಯನ ಮಾಡಲು ನಿರ್ಬಂಧಿಸಲ್ಪಟ್ಟ ಹತ್ತು ಲಕ್ಷ ರೋಹಿಂಗ್ಯನ್ರನ್ನು ಮರಳಿ ಕರೆ ತರುವುದು ಅಸಾಧ್ಯವೆಂದು ಅಮೆರಿಕ ಮಾನವ ಹಕ್ಕು ಕೌನ್ಸಿಲ್ ನೇಮಿಸಿದ ಸತ್ಯಶೋಧನಾ ತಂಡ ತಿಳಿಸಿದೆ.
2017ರಲ್ಲಿ ರೋಹಿಂಗ್ಯನ್ರ ವಿರುದ್ಧ ಮ್ಯಾನ್ಮಾರ್ ಸೈನ್ಯ ನಡೆಸಿದ ದಾಳಿ ವಂಶಹತ್ಯೆಯೆಂದು ವಿಶ್ವಸಂಸ್ಥೆ ವಿಶ್ಲೇಷಿಸಿದ್ದು ಇದಕ್ಕೆ ಸೇನೆ ಮುಖ್ಯಸ್ಥ ಮಿನ್ ಆಂಗ್ ಹ್ಲೇಂಗ್ ಸಹಿತ ಹಿರಿಯ ಅಧಿಕಾರಿಗಳು ನೇತೃತ್ವ ನೀಡಿದ್ದರು. ಇವರ ವಿರುದ್ಧ ಕ್ರಮಕೈಗೊಳ್ಳಲು ಸತ್ಯಶೋಧನಾ ತಂಡ ಆಗ್ರಹಿಸಿತು. ಗ್ರಾಮಗಳನ್ನು ಸುಟ್ಟು ಹಾಕಲಾಗಿದೆ, ಕೊಲೆ, ಅತ್ಯಾಚಾರ, ಹಿಂಸೆ ನೀಡಲಾಗಿದೆ. 7.40 ಲಕ್ಷ ಮಂದಿ ಗಡಿ ದಾಟಿ ಬಾಂಗ್ಲಾದೇಶಕ್ಕೆ ಪಾರಾಗಲು ನಿರ್ಬಂಧಿಸಲ್ಪಟ್ಟರು. ಹಿಂದೆ ಓಡಿ ಹೋದ ಅನೇಕ ಮಂದಿ ನಿರಾಶ್ರಿತರಾಗಿ ಜೀವಿಸುತ್ತಿದ್ದಾರೆ.
ಇಂತಹ ಸ್ಥಿತಿಯಲ್ಲಿ ಮ್ಯಾನ್ಮಾರಿನ ರಾಖ್ನೆ ರಾಜ್ಯದಲ್ಲಿ ಆರು ಲಕ್ಷ ರೋಹಿಂಗ್ಯನ್ನರು ಸಂಕಷ್ಟದ ಸ್ಥಿತಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಜನಾಂಗೀಯ ಹತ್ಯೆಯ ಸಂಕೇತವಾಗಿ ಬದಲಾದ ಮ್ಯಾನ್ಮಾರಿನಲ್ಲಿ ಈಗಿರುವ ರೋಹಿಂಗ್ಯನ್ನರು ಗಂಭೀರ ಅಪಾಯದಲ್ಲಿದ್ದಾರೆ. ತಮ್ಮ ದುಷ್ಟ ಕಾರ್ಯವನ್ನು ಸರಕಾರ ನಿಷೇಧಿಸುತ್ತಿದ್ದು ಸಾಕ್ಷ್ಯನಾಶಕ್ಕೆ ಯತ್ನಿಸುತ್ತಿದೆ. ತನಿಖೆ ಮಾಡಲು ಬಿಡುತ್ತಿಲ್ಲ. ರೊಹಿಂಗ್ಯನ್ನರ ಜಮೀನು ವಶಪಡಿಸಿ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಸತ್ಯಶೋಧನಾ ತಂಡದ ವರದಿ ತಿಳಿಸಿದೆ. ಮಂಗಳವಾರ ವರದಿಯನ್ನು ಜಿನೀವಾದಲ್ಲಿ ಸಲ್ಲಿಸಲಾಗುವುದು.
ಇದೇ ವೇಳೆ, ಸತ್ಯಶೋಧನಾ ತಂಡದ ವರದಿಯನ್ನು ಮ್ಯಾನ್ಮಾರ್ ಸೈನಿಕ ವಕ್ತಾರ ಸ್ವಮಿನ್ ಟುನ್ ನಿರಾಕರಿಸಿದ್ದು ,”ವರದಿ ಏಕಪಕ್ಷೀಯವಾಗಿದೆ” ಎಂದು ಆರೋಪಿಸಿದ್ದಾರೆ. ಆಧಾರ ರಹಿತ ಆರೋಪಗಳ ಬದಲಾಗಿ ಅವರು ಎದುರಿಸುವ ಸತ್ಯಸ್ಥಿತಿಯನ್ನು ಮನವರಿಕೆ ಮಾಡಿಕೊಳ್ಳಲಿ ಎಂದು ಅವರು ಹೇಳಿದರು.












