ನಾಲ್ಕು ತಿಂಗಳಲ್ಲಿ ಅರ್ಥವ್ಯವಸ್ಥೆ ಉತ್ತಮಗೊಳ್ಳಲಿದೆ- ನೀತಿ ಆಯೋಗ್

0
478

ಸನ್ಮಾರ್ಗ ವಾರ್ತೆ

ಮುಂಬೈ,ಸೆ.19: ಮುಂದಿನ ಆರ್ಥಿಕ ಹಂತ ಮುಗಿಯುವಾಗ ಭಾರತದ ಅರ್ಥವ್ಯವಸ್ಥೆ ಉತ್ತಮ ಸ್ಥಿತಿಗೆ ಮರಳಲಿದೆ ಎಂದು ನೀತಿ ಆಯೋಗ್ ಸಿಇಒ ಅಮಿತಾಭ್ ಕಾಂತ್ ಹೇಳಿದರು. ಜಿಡಿಪಿ ಮರುಗಳಿಸಲು ಕ್ರಮವನ್ನು ಮೋದಿ ಸರಕಾರ ಕೈಗೊಂಡಿದೆ. ಮೂರರಿಂದ ನಾಲ್ಕು ತಿಂಗಳಲ್ಲಿ ಇದು ಅರ್ಥವ್ಯವಸ್ಥೆಯಲ್ಲಿ ಪ್ರತಿಫಲನವಾಗಲಿದೆ ಎಂದು ಅವರು ಹೇಳಿದರು.

ಭಾರತ ರಫ್ತು ಹೆಚ್ಚಿಸುವತ್ತ ಈಗ ಗಮನ ಕೊಡಬೇಕು. ಇಲಕ್ಟ್ರಾನಿಕ್ ,ಟೆಕ್ಸ್‌ಟೈಲ್ಸ್ ರಫ್ತು ಮಾಡಲು ಹೆಚ್ಚು ಗಮನ ಹರಿಸಬೇಕಿದೆ. ಅಮೆರಿಕ-ಚೀನ ವ್ಯಾಪಾರ ಯುದ್ಧದ ಲಾಭವನ್ನು ಪಡೆಯಲು ಭಾರತಕ್ಕೆ ಸಾಧ್ಯವಾಗಬೇಕಿದೆ ಎಂದು ಅಮಿತಾಬ್ ಹೇಳಿದರು. ರಫ್ತು ಕ್ಷೇತ್ರದ ವ್ಯವಸ್ಥೆಯಲ್ಲಿ ಬದಲಾವಣೆಯಾಗಬೇಕು. ಇದು ಸಾಧ್ಯವಾದರೆ ಮಾತ್ರ ಆರ್ಥಿಕ ಬೆಳವಣಿಗೆ ಹೆಚ್ಚಿಸಲು ಸಾಧ್ಯವೆಂದರು. ಭಾರತದ ಜಿಡಿಪಿ ಕಳೆದ ಆರು ವರ್ಷಗಳಲ್ಲಿ ತೀರ ಕಡಿಮೆ ದರ ಶೇ.5 ಕುಸಿದಿದ್ದು ಇದರಿಂದಾಗಿ ದೇಶದಲ್ಲಿ ಆರ್ಥಿಕ ಮಾಂದ್ಯ ತೀವ್ರಗೊಂಡಿದೆ.