ಸನ್ಮಾರ್ಗ ವಾರ್ತೆ
ಇಸ್ಲಾಮಾಬಾದ್,ಸೆ.21:ಪಾಕಿಸ್ತಾನ ಇಂಟರ್ ನ್ಯಾಶನಲ್ ಏರ್ಲೈನ್ಸ್ ಪ್ರಯಾಣಿಕರಿಲ್ಲದೆ 46 ವಿಮಾನಗಳನ್ನು ಹಾರಿಸಿದೆಯೆಂದು ವರದಿಯಾಗಿದೆ.
2016-17ರಲ್ಲಿ ಪಾಕಿಸ್ತಾನ ಜನರಿಲ್ಲದೆ ವಿಮಾನವನ್ನು ಹಾರಾಟ ನಡೆಸಿತ್ತು ಇದರಿಂದಾಗಿ ಪಾಕಿಸ್ತಾನದ ವಿಮಾನ ಕಂಪೆನಿಗೆ 180 ಮಿಲಿಯನ್ ರೂಪಾಯಿ ನಷ್ಟವಾಗಿದೆ. ಹಜ್ ಮತ್ತು ಉಮ್ರಕ್ಕೆ ಹಚ್ಚುವರಿ ಸರ್ವಿಸ್ ನಡೆಸಿದ 180 ವಿಮಾನಗಳಲ್ಲಿಯೂ ಜನರಿರಲಿಲ್ಲ ಎಂದು ಜಿಯೊ ನ್ಯೂಸ್ ವರದಿ ಮಾಡಿದೆ.
ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂತಹ ಅವ್ಯವಸ್ಥೆಯಂಟಾಗಿದೆ ಎಂದು ಪಾಕಿಸ್ತಾನ್ ಏರ್ಲೈನ್ಸ್ ಹೇಳಿಕೊಂಡಿದೆ. ಆರ್ಥಿಕ ನಷ್ಟ ಅನುಭವಿಸುತ್ತಿರುವ ಪಾಕಿಸ್ತಾನ ಏರ್ಲೈನ್ಸ್ ಸುಮಾರು 1000 ಸಿಬ್ಬಂದಿಗಳನ್ನು ಕೆಲಸದಿಂದ ತೆಗೆದುಹಾಕಿತ್ತು.












