ಸನ್ಮಾರ್ಗ ವಾರ್ತೆ-
ಜಿದ್ದ, ಸೆ. 23: ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅಕ್ಟೋಬರ್ 27, 28 ತಾರೀಕಿಗೆ ಸೌದಿ ಅರೇಬಿಯಕ್ಕೆ ಭೇಟಿ ನೀಡಲಿದ್ದು ರಿಯಾದ್ನ ಎಕ್ಸಿಬಿಷನ್ ಸೆಂಟರ್ ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತಾಡಲಿದ್ದಾರೆ. ಜೊತೆಗೆ ಹಲವಾರು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದು ವಿವರಗಳನ್ನು ಬಿಡುಗಡೆಗೊಳಿಸಲಾಗಿಲ್ಲ.
ಭಾರತ, ಸೌದಿ ಅರೇಬಿಯ ಸೌಹಾರ್ದ ಉತ್ತಮಪಡಿಸುವುದರ ಭಾಗವಾಗಿ ಮೋದಿ ಭೇಟಿ ನಡೆಸುತ್ತಿದ್ದಾರೆ. ಹಲವರು ವ್ಯಾಪಾರ ಒಪ್ಪಂದಗಳಿಗೆ ಈಗಾಗಲೇ ಸಹಿ ಹಾಕಲಾಗಿದ್ದು ಹೊಸ ವ್ಯಾಪಾರ ಒಪ್ಪಂದ ಸೌದಿ, ಭಾರತದ ನಡುವೆ ನಡೆಯಲಿದೆ. 2016ರಲ್ಲಿ ನರೇಂದ್ರ ಮೋದಿ ಸೌದಿ ಅರೇಬಿಯಕ್ಕೆ ಭೇಟಿ ನೀಡಿದ್ದರು. ಅಕ್ಟೋಬರ್ ನಲ್ಲಿ ಸಂದರ್ಶನದ ವಿವರಗಳನ್ನು ಭಾರತದ ದೂತವಾಸ ಮೂಲಗಳು ದೃಢಪಡಿಸಲಿವೆ.
.












