ಸನ್ಮಾರ್ಗ ವಾರ್ತೆ-
ಟೆಹ್ರಾನ್, ಸೆ. 23: ಶಾಂತಿ ಮರಳಬೇಕಾದರೆ ವಿದೇಶಿ ಸೇನೆಯು ಕೊಲ್ಲಿ ಪ್ರದೇಶದಿಂದ ಹೋಗಬೇಕು ಎಂದು ಇರಾನ್ ಅಧ್ಯಕ್ಷ ಹಸನ್ ರೂಹಾನಿ ಹೇಳಿದ್ದಾರೆ. ನೆರೆ ರಾಷ್ಟ್ರಗಳೊಂದಿಗೆ ಸೌರ್ಹಾದ ಬೆಳೆಸಲು ಇರಾನ್ ಸಿದ್ಧವಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೊಲ್ಲಿ ಶಾಂತಿ ಯೋಜನೆಯನ್ನು ಮಂಡಿಸುವೆ ಎಂದೂ ರೂಹಾನಿ ತಿಳಿಸಿದರು.
ಸೌದಿಯ ತೈಲ ಸಂಸ್ಕರಣಾಗಾರಕ್ಕೆ ಇರಾನ್ ದಾಳಿ ನಡೆಸಿದೆ ಎಂದು ಅಮೆರಿಕ ಆರೋಪಿಸಿತ್ತು. ನಂತರ ಅಮೆರಿಕ ಸೌದಿಗೆ ಸೇನೆಯನ್ನು ಕಳುಹಿಸಿಕೊಡಲು ತೀರ್ಮಾನಿಸಿತ್ತು. ಇದು ತೈಲ ಕೇಂದ್ರ ಸುರಕ್ಷೆಗಾಗಿ ಎಂದು ಹೇಳಿದೆ. ಇದೇ ವೇಳೆ, ತಮ್ಮನ್ನು ಆಕ್ರಮಿಸುವ ದೇಶ ಯುದ್ಧರಂಗವಾಗಿ ಮಾರ್ಪಡುತ್ತದೆ ಎಂದು ಇರಾನ್ ಮುನ್ನೆಚ್ಚರಿಕೆಯನ್ನೂ ನೀಡಿದೆ. ಸಣ್ಣ ದಾಳಿ ನಡೆದರೂ ದೊಡ್ಡ ಪ್ರತಿದಾಳಿಗೆ ಕಾರಣವಾಗಲಿದೆ. ಸೌದಿಅರೇಬಿಯ ಅರಾಮ್ಕೊದ ತೈಲ ಕೇಂದ್ರಕ್ಕೆ ಡ್ರೋಣ್ ದಾಳಿ ನಡೆದಿತ್ತು. ಮಧ್ಯಪ್ರಾಚ್ಯ ಪುನಃ ಸಂಘರ್ಷ ಭರಿತವಾಗಿದೆ. ಇರಾನೇ ಡ್ರೋಣ್ ಹಾರಿಸಿದೆ ಎಂದು ಸೌದಿ ಅರೇಬಿಯವೂ ಹೇಳುತ್ತಿದೆ. ಆದರೆ ಯಮನ್ನ ಹೂತಿಗಳು ಡ್ರೋಣ್ ಹಾರಿಸಿದ್ದು ತಾವೆಂದು ಹೇಳುತ್ತಿದ್ದಾರೆ. ದಾಳಿ ನಡೆದ ಬಳಿಕ ಇರಾನ್ ವಿರುದ್ಧ ಅಮೆರಿಕ ದಿಗ್ಬಂಧನವನ್ನು ಇನ್ನಷ್ಟು ಬಿಗಿಗೊಳಿಸಿದೆ.












