ಸನ್ಮಾರ್ಗ ವಾರ್ತೆ
ನ್ಯೂಯಾರ್ಕ್,ಸೆ.24: ಭಾರತದ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಸಮಾಲೋಚನೆ ನಡೆಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಲಹೆ ನೀಡಿದ್ದಾರೆ. ತಾನು ಮತ್ತು ಇಮ್ರಾನ್ ಖಾನ್ರೊಂದಿಗೆ ಪರಸ್ಪರ ಚರ್ಚಿಸಿದ ವಿಷಯವನ್ನು ಟ್ರಂಪ್ ತಿಳಿಸಿದ್ದಾರೆ.
ನ್ಯೂಯಾರ್ಕ್ನಲ್ಲಿ ವಿಶ್ವಸಂಸ್ಥೆ ಔತಣದ ವೇಳೆ ಭಾರತ-ಪಾಕ್ ಪ್ರಧಾನಿ ಚರ್ಚಿಸಬೇಕೆಂದು ಟ್ರಂಪ್ ಸೂಚಿಸಿದ್ದು ಅಗತ್ಯವೆಂದಾದರೆ ಚರ್ಚೆಯಲ್ಲಿ ತಾನೂ ಭಾಗವಹಿಸುವೆ ಎಂದು ಇಮ್ರಾನ್ರಿಗೆ ಟ್ರಂಪ್ ತಿಳಿಸಿದರು.
ಪಾಕಿಸ್ತಾನದ ಮೇಲೆ ತನಗೆ ವಿಶ್ವಾಸ ಇದೆ. ಕಾಶ್ಮೀರ ವಿಷಯವನ್ನು ಎಲ್ಲರೂ ಉತ್ತಮ ರೀತಿಯಲ್ಲಿ ನಿರ್ವಹಿಸಬೇಕು. ನರೇಂದ್ರ ಮೋದಿ, ಇಮ್ರಾನ್ ಖಾನ್ರೊಂದಿಗೆ ತನಗೆ ಉತ್ತಮ ಬಾಂಧವ್ಯ ಇದೆ. ಅಭಿಪ್ರಾಯ ಏನೇ ಇದ್ದರೂ ಚರ್ಚಿಸಿ ಉತ್ತರ ಕಂಡು ಹಿಡಿಯಬೇಕಾಗಿದೆ. ತಾನೂ ಚರ್ಚೆಯಲ್ಲಿ ಭಾಗಿಯಾಲು ಬಯಸುತ್ತೇನೆ ಎಂದು ಟ್ರಂಪ್ ಹೇಳಿದರು. ಇದೇ ವೇಳೆ ಕಾಶ್ಮೀರ ವಿಷಯದಲ್ಲಿ ಮೂರನೆ ಕಕ್ಷಿಯ ಮಧ್ಯಸ್ಥಿಕೆ ಬೇಕಿಲ್ಲ ಎಂದು ಭಾರತದ ನಿಲುವು ಆಗಿದ್ದು, ಮೋದಿ ಈ ವಿಷಯವನ್ನು ಟ್ರಂಪ್ಗೆ ತಿಳಿಸಿದ್ದಾರೆಂದು ವರದಿಯಾಗಿದೆ.












