ಬಾಲಕೋಟ್‍ನಲ್ಲಿ ಭಯೋತ್ಪಾದಕರ ಶಿಬಿರ: ಆರೋಪ ನಿರಾಕರಿಸಿದ ಪಾಕಿಸ್ತಾನ

0
501

ಸನ್ಮಾರ್ಗ ವಾರ್ತೆ

ಇಸ್ಲಾಮಾಬಾದ್,ಸೆ.25:ಭಯೋತ್ಪಾದಕ ಸಂಘಟನೆ ಜೈಷೆ ಮುಹಮ್ಮದ್ ಬಾಲಕೋಟ್‍ನಲ್ಲಿ ತನ್ನ ಶಿಬಿರವನ್ನು ಪುನರಾರಂಭಿಸಿ ಸಕ್ರಿಯವಾಗಿದೆ ಎಂಬ ಭಾರತದ ಆರೋಪವನ್ನು ಆಧಾರ ರಹಿತ ಎಂದು ಪಾಕಿಸ್ತಾನ ಹೇಳಿದೆ.

ಫೆಬ್ರುವರಿಯಲ್ಲಿ ವಾಯುದಾಳಿಯಲ್ಲಿ ಭಾರತ ಧ್ವಂಸ ಮಾಡಿದ್ದ ಸ್ಥಳಗಳಲ್ಲಿ ಪುನಃ ಶಿಬಿರಗಳು ಬಾಲಕೋಟ್‍ನಲ್ಲಿ ಸಕ್ರಿಯವಾಗಿದೆ ಮತ್ತು 500 ನುಸುಳುಕೋರರು ಭಾರತಕ್ಕೆ ನುಸುಳಲು ಸಜ್ಜಾಗಿದ್ದಾರೆ ಎಂದು ಭೂಸೇನಾ ಮುಖ್ಯಸ್ಥ ಬಿಪಿನ್ ರಾವತ್ ಹೇಳಿದ್ದರು. ನುಸುಳುವಿಕೆ ಆರೋಪ ಜಮ್ಮು-ಕಾಶ್ಮೀರದ ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ತಿರುಗಿಸುವ ಪ್ರಯತ್ನವಾಗಿದೆ ಎಂದು ಪಾಕಿಸ್ತಾನದ ವಿದೇಶ ಸಚಿವಾಲಯ ಪತ್ರಿಕಾ ಹೇಳಿಕೆಯಲ್ಲಿ ಬೆಟ್ಟು ಮಾಡಿದೆ.