ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಸೆ.28: 2011ರಲ್ಲಿ ಸೆಪ್ಟಂಬರ್ 26 ರಂದು ನಡೆದ ಮುಂಬೈ ಭಯೋತ್ಪಾದನಾ ದಾಳಿಯ ಮಾದರಿಯಲ್ಲಿ ಪುನಃ ಭಯೋತ್ಪಾದನಾ ದಾಳಿ ನಡೆಸುವ ಪ್ರಯತ್ನ ನಡೆಯುತ್ತಿದೆ ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಹೇಳಿದ್ದಾರೆ.
ಶಾಂತಿ ಬಯಸುವ ಯಾವುದೇ ದೇಶಕ್ಕೆ ಭಾರತದ ನೌಕಾಸೇನೆ ಬೆದರಿಕೆಯಲ್ಲ. ಹಿಂದೂ ಮಹಾಸಾಗದಲ್ಲಿನ ಸಣ್ಣ ದೇಶಗಳಿಗೆ ಆತ್ಮವಿಶ್ವಾಸ ಒದಗಿಸಿ ಕೊಡಲು ನೌಕಾ ಸೇನೆಗೆ ಸಾಧ್ಯವಿದೆ. ಆದರೆ, ಪುನಃ ಮುಂಬೈ ಭಯೋತ್ಪಾದನಾ ದಾಳಿಯ ಮಾದರಿಯಲ್ಲಿ ಭಯೋತ್ಪದನಾ ದಾಳಿಗೆ ಯೋಜನೆ ಹಾಕಿದ್ದರೆ ನೌಕಾಸೇನೆ ಅದನ್ನು ಪ್ರತಿರೋಧಿಸುತ್ತದೆ ಎಂದು ರಾಜ್ನಾಥ್ ಸಿಂಗ್ ಹೇಳಿದರು. ಐಎನ್ಎಸ್ ಖಂಡೇರಿ ನೌಕಾ ಸೇನೆಗೆ ಸಮರ್ಪಿಸಿ ಅವರು ಮಾತಾಡುತ್ತಿದ್ದರು.
ಐಎನ್ಎಸ್ ಖಂಡೇರಿ ಒಂದು ಭಾರತದ ನೌಕಾಸೇನೆಯ ಭಾಗವಾಗಿದೆ. ಆದ್ದರಿಂದ ಪಾಕಿಸ್ತಾನಕ್ಕೆ ಹೆಚ್ಚು ನಿರಾಶೆಯಾಗಬಹುದು. 1971ರ ಯುದ್ಧದಲ್ಲಿ ನೌಕಾಸೇನೆ ಭಾರತಕ್ಕೆ ನಿರ್ಣಾಯಕ ಪಾತ್ರವಹಿಸಿತ್ತೆಂದು ಅವರು ಹೇಳಿದರು. ಕಾಶ್ಮೀರದಲ್ಲಿ ಭಾರತ ನಡೆಸುವ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಜಾಗತಿಕ ಸಮುದಾಯದ ಬೆಂಬಲ ಇದೆ ಎಂದು ರಾಜ್ನಾಥ್ ಸಿಂಗ್ ಹೇಳಿದರು.












