ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಅ.1: ಅಮೆರಿಕದ ದಿಗ್ಬಂಧನಕ್ಕೆ ತಿರುಗೇಟು ನೀಡಿದ ಭಾರತ ರಷ್ಯದಿಂದ ರಕ್ಷಣಾ ಮಿಸೈಲು ಖರೀದಿಸುವ ಹಕ್ಕು ಭಾರತಕ್ಕಿದೆ ಎಂದು ವಿದೇಶ ಸಚಿವ ಎಸ್.ಜೈಶಂಕರ್ ಹೇಳಿದರು.
ಯಾವ ದೇಶದಿಂದ ರಕ್ಷಣಾ ಆಯುಧ ಖರೀದಿಸಬೇಕೆಂಬುದನ್ನು ನಿರ್ಧರಿಸುವ ಹಕ್ಕು ಭಾರತಕ್ಕಿದೆ. ಅದನ್ನು ತಡೆಯುವ ಹಕ್ಕು ಯಾರಿಗೂ ಇಲ್ಲ ಎಂದು ಜೈಶಂಕರ್ ಹೇಳಿದರು. ಅಮೆರಿಕ ಗೃಹ ಕಾರ್ಯದರ್ಶಿ ಮೈಕ್ ಪೊಂಪಿಯ ಅವರನ್ನು ಭೇಟಿಯಾದ ಬಳಿಕ ಜೈಶಂಕರ್ ಹೇಳಿದ್ದಾರೆ.
ರಷ್ಯ, ಅಮೆರಿಕಗಳಿಂದ ಆಯುದ್ಧ ಪಡೆಯಬಾರದೆನ್ನುವ ಅಧಿಕಾರ ಯಾವ ದೇಶಕ್ಕೂ ಇಲ್ಲ. ಎಲ್ಲಿಂದ ಖರೀದಿಸಬೇಕೆನ್ನುವ ಆಯ್ಕೆಯ ಹಕ್ಕು ನಮಗಿದೆ ಎಂದು ಜೈಶಂಕರ್ ಹೇಳಿದರು. 2017ರಲ್ಲಿ ರಷ್ಯ ಇತರ ದೇಶಗಳೊಂದಿಗೆ ಬೃಹತ್ ಆಯುಧ ವಹಿವಾಟು ನಡೆಸದಂತೆ ಅಮೆರಿಕ ದಿಗ್ಬಂಧ ಹೇರಿತ್ತು.
ನ್ಯಾಟೊ ಸದಸ್ಯ ಟರ್ಕಿ ರಷ್ಯದಿಂದ ಎಸ್-400 ತಂತ್ರಜ್ಞಾನ ಪಡೆದಿರುವುದನ್ನು ಅಮೆರಿಕ ನಿಷೇದಿಸಿತ್ತು. ಆದರೆ ಅಮೆರಿಕದ ದಿಗ್ಬಂಧನವನ್ನು ಮೀರಿ ರಷ್ಯದಿಂದ 520 ದಶಲಕ್ಷ ಡಾಲರ್ ವೆಚ್ಚದಲ್ಲಿ ಎಸ್-400 ಮಿಸೈಲ್ ತಂತ್ರಜ್ಞಾನವನ್ನು ಭಾರತ ಪಡೆದುಕೊಂಡಿದೆ.












