ಅಮೆರಿಕ ವೀಸಾ ವಂಚನೆ ಪ್ರಕರಣ: ಭಾರತ ಮೂಲದ ಸಿಇಓಗೆ 7 ವರ್ಷ ಜೈಲು

0
472

ಸನ್ಮಾರ್ಗ ವಾರ್ತೆ

ಕ್ಯಾಲಿಫೋರ್ನಿಯ,ಅ.1:ಇದುವರೆಗೆ ಅಮೆರಿಕದಲ್ಲಿ ನಡೆದ ಅತಿದೊಡ್ಡ ವೀಸಾ ವಂಚನೆಯ ಪ್ರಕರಣದಲ್ಲಿ ಆರೋಪಿಯಾಗಿರುವ ಭಾರತ ಮೂಲಕದ ಸಿಇಒಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ವಾಷಿಂಗ್ಟನ್‍ನಲ್ಲಿ ಕೇಂದ್ರವಿರುವ ಬೃಹತ್ ತಂತ್ರಜ್ಞಾನ ಸಂಸ್ಥೆಯಾದ ಡಿವನ್ಸಿ, ಅಸ್ಮಿಟ್ರಿಯ ಸಂಸ್ಥಾಪಕ ಪ್ರದ್ಯುಮ್ನ್ ಕುಮಾರ್ ಸ್ಯಾಮುವೇಲ್‍ರನ್ನು (50) ಶಿಕ್ಷಿಸಲಾಗಿದೆ.

ಅಮೆರಿಕಕ್ಕೆ ಬಂದು ದೇಶದ ಕಾನೂನು ಅನುಸರಿಸುವ ಬದಲು ಅತಿಯಾಶೆಯಿಂದ ವಂಚನೆ ನಡೆಸುವುದರಲ್ಲಿ ಅವರು ಗಮನ ಕೇಂದ್ರೀಕರಿಸಿದ್ದಾರೆ ಎಂದು ವಾಷಿಂಗ್ಟನ್ ಸ್ಟೇಟ್ ವೆಸ್ಟರ್ನ್ ಕೋರ್ಟ್ ಜಡ್ಜ್, ಜೇಮ್ಸ್ ರಾಬರ್ಟ್ ತೀರ್ಪಿನಲ್ಲಿ ಹೇಳಿದ್ದಾರೆ. ಅವರು ಸೆಪ್ಟಂಬರ್ 20ಕ್ಕೆ ತೀರ್ಪು ನೀಡಿದ್ದಾರೆ.

ಭಾರತದ 250 ಉದ್ಯೋಗಿಗಳು ಈತನ ವಂಚನೆಯ ಬಲೆಯಲ್ಲಿ ಸಿಲುಕಿದ್ದರು. ಪ್ರತಿಯೊಬ್ಬ ಉದ್ಯೋಗಾಕಾಂಕ್ಷಿಯಿಂದ ಎಚ್1ಬಿ ವೀಸಾ ಅರ್ಜಿಗೆ 5000 ಡಾಲರ್ ಪಡೆದಿದ್ದನು. ಇದಲ್ಲದೆ ಉದ್ಯೋಗಿಗಳ ಉದ್ಯೋಗ ತೆರಿಗೆ ಸರಕಾರಕ್ಕೆ ಸಲ್ಲಿಸದೆ 10 ಲಕ್ಷ ಡಾಲರ್ ವಂಚನೆ ನಡೆಸಿದ್ದಾನೆ. 2018 ಜನವರಿ ವಂಚನೆ ಬಹಿರಂಗವಾಗಿತ್ತು. ನಂತರ ಆರೋಪಿ ಭಾರತಕ್ಕೆ ಪರಾರಿಯಾಗಿದ್ದನು. ತನಿಖೆ ನಡೆಯುವ ಸಮಯದಲ್ಲಿ ಅಮೆರಿಕಕ್ಕೆ ಮರಳಿದ ಈತನನ್ನು ಸಿಯಾಟ್ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದರು.