ಸನ್ಮಾರ್ಗ ವಾರ್ತೆ
ತಿರುವನಂತಪುರಂ,ಅ.2: ಗಾಂಧಿ ಹಂತಕರೇ ಗಾಂಧೀಜಿಯನ್ನು ಸ್ವಂತಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಮಹಾತ್ಮಾಗಾಂಧಿ ಜನ್ಮದಿನಾಚರಣೆ ಸಂಬಂಧಿಸಿ ಅವರು ಫೇಸ್ಬುಕ್ನಲ್ಲಿ ಹಾಕಿದ ಪೋಸ್ಟ್ನಲ್ಲಿ ಈ ರೀತಿ ವಿಮರ್ಶಿಸಿದ್ದಾರೆ. ಗಾಂಧೀಜಿಯ ಮಾತುಗಳು ತಮ್ಮ ಅನುಕೂಲಕ್ಕೆ ಬೇಕಾದಂತೆ ವ್ಯಾಖ್ಯಾನಿಸಲು ಇವರು ಶ್ರಮಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ಗಾಂಧಿ ಜಯಂತಿ ಹೆಚ್ಚು ಪ್ರಸಕ್ತವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಅವರ ಪೋಸ್ಟ್ ಹೀಗಿದೆ-
ನಮ್ಮ ರಾಷ್ಟ್ರಪಿತ ಮಹಾತ್ಮಾ ಗಾಂಧಿಯ ನೂರೈವತ್ತನೆ ಜನ್ಮದಿನ ಇಂದು. ಸ್ವಂತ ಜೀವನ ಜಗತ್ತಿಗೆ ಸಂದೇಶವನ್ನಾಗಿಸಿದವರು ಗಾಂಧೀಜಿ. ಅವರು ಎತ್ತಿ ಹಿಡಿದ ಮೌಲ್ಯಗಳು ಶತಮಾನ ಕಳೆದರೂ ಹೊಳಪು ಕಳೆದುಕೊಂಡಿಲ್ಲ. ಎಲ್ಲ ವಿಭಾಗದ ಜನರನ್ನು ಒಂದಾಗಿ ನೋಡುವ ವಿಶಾಲ ದೃಷ್ಟಿಕೋನವನ್ನು ಎತ್ತಿಹಿಡಿದು ಅವರು ಪ್ರತಿಯೊಂದು ಹೆಜ್ಜೆ ಇಟ್ಟಿದ್ದಾರೆ.
ಆದರೆ, ದೇಶವನ್ನು ಇಂದು ಗಾಂಧೀಜಿಯಿಂದ ಹಿಂತಳ್ಳಲು ಕೆಲವರು ಯತ್ನಿಸುತ್ತಿದ್ದಾರೆ. ಗಾಂಧಿ ಹಂತಕರೇ ಗಾಂಧೀಜಿಯನ್ನು ಸ್ವಂತಗೊಳಿಸಲು ಶ್ರಮಿಸುತ್ತಿದ್ದಾರೆ. ಗಾಂಧೀಜಿಯ ಮಾತುಗಳನ್ನು ತಮಗೆ ಬೇಕಾದಂತೆ ವ್ಯಾಖ್ಯಾನಿಸಲು ಶ್ರಮಿಸುತ್ತಿದ್ದು ಈ ಪರಿಸ್ಥಿತಿಯಲ್ಲಿ ಈ ಬಾರಿಯ ಗಾಂಧಿ ಜಯಂತಿ ಆಚರಣೆ ಹೆಚ್ಚು ಮಹತ್ವವಿದೆ. ರಾಷ್ಟ್ರಪಿತ ಗಾಂದೀಜಿಯವರ ಆಶಯಗಳನ್ನು ಜಾರಿಗೆ ತರುವ ಪ್ರತಿಜ್ಞೆಯನ್ನು ಈ ದಿನದಲ್ಲಿ ಪ್ರತಿಯೊಬ್ಬ ಭಾರತೀಯರನ್ನು ಕೈಗೊಳ್ಳಬೇಕಾಗಿದೆ.












