ಗಾಂಧಿ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿದ್ದರು- ಮೋಹನ್ ಭಾಗವತ್

0
639

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.3: ದೇಶ ವಿಭಜನೆಯ ದಿನಗಳಲ್ಲಿ ಗಾಂಧಿ ದಿಲ್ಲಿಯಲ್ಲಿ ಅವರ ವಾಸಸ್ಥಳದ ಸಮೀಪವಿದ್ದ ಆರೆಸ್ಸೆಸ್ ಶಾಖೆಗೆ ಭೇಟಿ ನೀಡಿದ್ದರು ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದರು. ಅವರು ಆರೆಸ್ಸೆಸ್ ಕಾರ್ಯಕರ್ತರನ್ನು ಉದ್ದೇಶಿಸಿ ಮಾತಾಡಿದ್ದರು. ಅವರು ಆರೆಸ್ಸೆಸ್ ಶಿಸ್ತು, ಜಾತಿ ಚಿಂತನೆಗಳಿಲ್ಲದ್ದಕ್ಕೆ ಸಂತೋಷವನ್ನೂ ವ್ಯಕ್ತಪಡಿಸಿದ್ದರು. ಇದಕ್ಕೆ ಸಂಬಂಧಿಸಿದ ವರದಿ 1947ರ ‘ಹರಿಜನ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ ಎಂದು ಮಹಾತ್ಮಾ ಗಾಂಧಿಯ 150ನೇ ಜನ್ಮದಿನದಲ್ಲಿ ಆರೆಸ್ಸೆಸ್ ವೆಬ್‍ಸೈಟ್‍ಗೆ ಬರೆದ ಲೇಖನದಲ್ಲಿ ಮೋಹನ್ ಭಾಗವತ್ ಹೇಳಿದ್ದಾರೆ. 1936ರಲ್ಲಿ ವಾರ್ಧದ ಆರೆಸ್ಸೆಸ್ ಶಿಬಿರಕ್ಕೆ ಗಾಂಧಿ ಭೇಟಿ ನೀಡಿದರು. ಮರುದಿವಸ ಆರೆಸ್ಸೆಸ್ ಪ್ರಥಮ ಸಂಸ್ಥಾಪಕ ಡಾ. ಹೆಡೆವಾರ್ ವಾರ್ಧ ಆಶ್ರಮದಲ್ಲಿ ಗಾಂಧಿಯನ್ನು ಭೇಟಿಯಾದರು ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.