ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಅ.7: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾರ ಭಾರತ ಸಂದರ್ಶನದ ಚರ್ಚೆಯಲ್ಲಿ ರಾಷ್ಟ್ರೀಯ ಪೌರತ್ವ ಪಟ್ಟಿ (ಎನ್ಆರ್ಸಿ) ಚರ್ಚೆಯ ವಿಷಯವಾಗಿದೆ. ರಾಷ್ಟ್ರೀಯ ಪೌರತ್ವ ಪಟ್ಟಿಯ ಪ್ರಕ್ರಿಯೆಯಲ್ಲಿ ಭಾರತದಲ್ಲಿ ಏನು ನಡೆಯುತ್ತಿದೆ ಎಂದು ನಾವು ಕಣ್ಣು ತೆರೆದು ನೋಡುತ್ತೇವೆ ಎಂದು ಬಾಂಗ್ಲಾ ಪ್ರಧಾನಿ ಹೇಳಿದರು. ಆಡಳಿತ ಪಕ್ಷದ ನಾಯಕರು, ಜವಾಬ್ದಾರಿಯುತ ಸಚಿವರು ಬಾಂಗ್ಲಾದೇಶಕ್ಕೆ ಜೋಡಿಸಿ ಭಾರತ ಪೌರತ್ವ ಪಟ್ಟಿಯನ್ನು ಚರ್ಚಿಸುತ್ತಿರುವ ಹಿನ್ನೆಲೆಯಲ್ಲಿ ಈ ವಿಷಯವನ್ನು ಉದ್ಧರಿಸಿದ ಬಾಂಗ್ಲಾದೇಶ ಪ್ರಧಾನಿಗೆ ಭಾರತೀಯರಿಗೆ ಮಾತ್ರ ಸಂಬಂಧಿಸಿದ ಒಂದು ಕಾನೂನು ಪ್ರಕ್ರಿಯೆ ಎನ್ಆರ್ಸಿ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಬಾಂಗ್ಲಾದೇಶದ ನುಸುಳುಕೋರರನ್ನು ಗಡಿಪಾರು ಮಾಡುತ್ತೇವೆ ಎನ್ನುವ ಕೇಂದ್ರ ಗೃಹ ಸಚಿವ ಅಮಿತ್ ಶಾರ ಸಹಿತ ಬಿಜೆಪಿಯ ಪ್ರಮುಖ ನಾಯಕರು ಪದೇ ಪದೇ ಹೇಳುತ್ತಿದ್ದಾರೆ. ಈ ನಡುವೆ ಬಾಂಗ್ಲಾದೇಶ ಪ್ರಧಾನಿ ಭಾರತಕ್ಕೆ ಬಂದಿದ್ದಾರೆ. ಅವರೊಂದಿಗೆ ಈ ವಿಷಯವನ್ನು ಪ್ರಸ್ತಾಪಿಸಲು ಅವರು ಸಿದ್ಧರಾಗಿಲ್ಲ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾಗವಹಿಸಲು ನ್ಯೂಯಾರ್ಕಿಗೆ ಹೋದಾಗ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರೀಯ ಪೌರತ್ವ ಪಟ್ಟಿಯನ್ನು ಬಾಂಗ್ಲಾದೇಶದ ಪ್ರಧಾನಿ ಚರ್ಚಿಸಿದ್ದರು. ಅವರು ಎರಡು ವಾರಗಳಲ್ಲಿ ಇದು ಎರಡನೇ ಬಾರಿ ಅವರು ವಿಷಯವನ್ನು ಎತ್ತಿದ್ದಾರೆ. ಆದರೆ ನರೇಂದ್ರ ಮೋದಿ ಶೇಖ್ ಹಸೀನಾರಿಗೆ ಯಾವುದೇ ಭರವಸೆ ಕೊಟ್ಟರೂ ಎನ್ಆರ್ಸಿ ಪ್ರಕ್ರಿಯೆಯಲ್ಲಿ ಏನಾಗಬಹುದು ತಿಳಿಯಲು ನಾವು ಅದರತ್ತ ನಿಗಾ ಇರಿಸಿದ್ದೇವೆ ಎಂದು ಬಾಂಗ್ಲಾದೇಶ ವಿದೇಶ ಕಾರ್ಯದರ್ಶಿ ಶಾಹಿದುಲ್ ಹಕ್ ಹೇಳಿದರು.
“ಭಾರತದ ಆಂತರಿಕ ವಿಷಯ ಇದೆಂದು ನಮಗೆ ಭರವಸೆ ಸಿಕ್ಕಿದೆ. ನಾವೂ ಹಾಗೆ ಭಾವಿಸಿದ್ದೇವೆ. ಎಲ್ಲರನ್ನೂ ಎನ್ಆರ್ಸಿಗೆ ಸೇರಿಸಲು ಭಾರತ ಯಾವ ರೀತಿ ಬಯಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಸೀನಾರಿಗೆ ವಿವರಿಸಿದ್ದಾರೆ:” ಎಂದು ಶಾಹಿದುಲ್ ಹಕ್ ಹೇಳಿದರು.
ಅಸ್ಸಾಮಿನಲ್ಲಿ ಪೌರತ್ವವಿಲ್ಲದಾಗಿರುವ ಹತ್ತೊಂಬತ್ತು ಲಕ್ಷ ಜನರನ್ನು ಗಡೀಪಾರು ಮಾಡಲಾಗುವುದು ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದನ್ನು ಬೆಟ್ಟು ಮಾಡಿ ಕೇಳಿದಾಗ ಶೂನ್ಯದಿಂದ ಒಂದು ಸಮಸ್ಯೆ ಸೃಋಷ್ಟಿಸಲು ಈಗ ನಾವು ಬಯಸಿಲ್ಲ ಎಂದು ಅವರು ಹೇಳಿದರು. ಕೋರ್ಟಿನ ಸೂಚನೆ ಮೇರೆಗೆ ಎನ್ಆರ್ಸಿ ಜಾರಿಗೊಂಡಿದೆ. ಅದು ಮುಂದುವರಿಯುತ್ತಿದೆ. ಕೊನೆಗೆ ಏನಾಗುತ್ತದೆ ಎಂದು ನೋಡುತ್ತೇವೆ ಎಂದು ಹಿರಿಯ ಅಧಿಕಾರಿ ಹೇಳಿದರು.












