ಮಹಾಬಲಿಪುರದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ ಪಿಂಗ್‍ಗೆ ಅದ್ಧೂರಿ ಸ್ವಾಗತ

0
573

ಸನ್ಮಾರ್ಗ ವಾರ್ತೆ

ಚೆನ್ನೈ,ಅ.11: ಮಹಾಬಲಿಪುರದಲ್ಲಿ ನಡೆದ ಅನೌಪಚಾರಿಕ ಶೃಂಗದಲ್ಲಿ ಭಾಗವಹಿಸಲು ಚೀನದ ಅಧ್ಯಕ್ಷ ಕ್ಸಿ ಜಿನ್‍ ಪಿಂಗ್ ಚೆನ್ನೈ ತಲುಪಿದ್ದಾರೆ. ಕ್ಸಿ ಜಿನ್‍ ಪಿಂಗ್‍ರನ್ನು ರಾಜ್ಯಪಾಲ ಬನ್‍ವಾರಿಲಾಲ್ ಪುರೋಹಿತ್, ಮುಖ್ಯಮಂತ್ರಿ ಎಡಪ್ಪಾಟಿ ಕೆ.ಪಳನಿಸ್ವಾಮಿ ನೇತೃತ್ವದಲ್ಲಿ ಪರಂಪರಾಗತ ಜಾನಪದ ಹಾಡು ನೃತ್ಯಗಳೊಂದಿಗೆ ಅವರನ್ನು ಸ್ವಾಗತಿಸಲಾಯಿತು.

ವಿಶೇಷ ವಿಮಾನದಲ್ಲಿ ಕ್ಸಿ ಜಿನ್‍ ಪಿಂಗ್ ಬಂದಿಳಿದಿದ್ದು ಅವರಿಗೆ ವಿಶೇಷ ಸುರಕ್ಷೆ ಮತ್ತು ಸಂಚಾರ ವಾಹನವು ವಿಮಾನದಲ್ಲಿ ಚೀನದಿಂದಲೇ ಬಂದಿದೆ. ಭಾರತ-ಚೀನ ಸಂಬಂಧ ಇನ್ನಷ್ಟು ಭದ್ರಪಡಿಸಲು ಮಹಾಬಲಿಪುರ ಶೃಂಗದಿಂದ ಸಾಧ್ಯ ಮತ್ತು ಕ್ಸಿ ಜಿನ್‍ ಪಿಂಗ್‌ಗೆ ಮಹಾಬಲಿ ಪುರದಲ್ಲಿ ಜಿನ್‍ಪಿಂಗ್‍ಗೆ ಭಾರೀ ಸ್ವಾಗತ ನೀಡಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಾಚೀನ ನಗರ ಮಹಾಬಲಿಪುರದಲ್ಲಿ ಸಂಜೆ ಅನೌಪಚಾರಿಕ ಶೃಂಗ ನಡೆಯುತ್ತಿದೆ. ಐಟಿಸಿ ಗ್ರಾಮ್ಡ್ ಚೋಳ ಹೊಟೇಲಿನಲ್ಲಿ ಜಿನ್‍ಪಿಂಗ್‍ರಿಗೆ ವಾಸ್ತವ್ಯ ಕಲ್ಪಿಸಲಾಗಿದೆ.