ಸನ್ಮಾರ್ಗ ವಾರ್ತೆ
ಮುಂಬೈ,ಅ.15: ಎನ್ಸಿಪಿ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಪ್ರಫುಲ್ ಪಟೇಲ್ರಿಗೆ ದಾವೂದ್ ಇಬ್ರಾಹೀಂರ ಬಲಗೈ ಇಕ್ಬಾಲ್ ಮಿರ್ಚಿ ಯಾನೆ ಇಕ್ಬಾಲ್ ಮೆಮನ್ನೊಂದಿಗೆ ಆರ್ಥಿಕ ಸಂಬಂಧ ಇತ್ತು ಎಂದು ಎನ್ಫೋರ್ಸ್ಮೆಂಟ್ ಡಯರೆಕ್ಟರೇಟ್ (ಇಡಿ) ಹೇಳಿದೆ.
ಇದಕ್ಕೆ ಸಂಬಂಧಿಸಿ ಇಕ್ಬಾಲ್ ಮೆಮನ್ ಸಂಬಂಧಿಕನನ್ನು ಇಡಿ ಪ್ರಶ್ನಿಸಿದೆ. ಆದರೆ ಇಡಿಯ ಆರೋಪವನ್ನು ಪ್ರಫುಲ್ ಪಟೇಲ್ ನಿರಾಕರಿಸಿದ್ದಾರೆ.
ಬೆನಾಮಿ ಹೆಸರಿನಲ್ಲಿ ಇಕ್ಬಾಲ್ ಮೆಮನ್ನ 35 ಆಸ್ತಿಗಳನ್ನು ಇಡಿ ಪತ್ತೆಹಚ್ಚಿದ್ದು ವರ್ಲಿಯ ಆಸ್ತಿ ಸನ್ಬ್ಲಾಕ್ ರಿಯಲಟಸ್ ಪ್ರೈವೇಟ್ ಲಿಮಿಟೆಡ್ ಮತ್ತು ಪ್ರಫುಲ್ಗೆ ಶೇರು ಇರುವ ಮಿಲೆನಿಯಂ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ಗೆ ಮಾರಾಟ ನಡೆಸಲಾಗಿತ್ತು. ಸಿಜೆ ಹೌಸ್ನಲ್ಲಿ ಪ್ರಫುಲ್ಗೆ ಎರಡು ಫ್ಲಾಟ್ಗಳಿವೆ. ಸಿಜೆ ಹೌಸ್ನ ಮೂರನೆ ಮತ್ತು ನಾಲ್ಕನೆ ಅಂತಸ್ತು ಇಕ್ಬಾಲ್ನ ಪತ್ನಿ ಹಝರಾ ಇಕ್ಬಾಲ್ಗೆ 2007ರಲ್ಲಿ ನೀಡಲಾಗಿದೆ ಎಂದು ಇಡಿ ಹೇಳುತ್ತಿದೆ.
ಇದಲ್ಲದೆ ಬೇನಾಮಿ ಹೆಸರಿನಲ್ಲಿ ಖಂಡಾಲದಲ್ಲಿ ಆರು ಎಕರೆ ಬಂಗ್ಲೆ ಹಲವು ಆಸ್ತಿಗಳನ್ನು ಇಡಿ ಪತ್ತೆ ಹಚ್ಚಿದೆ. ಎಲ್ಲವೂ 500ಕೋಟಿ ರೂಪಾಯಿಗೂ ಮಿಕ್ಕಿದ ಮೌಲ್ಯದ ಆಸ್ತಿಗಳು ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಕೆಲವು ದಿನಗಳಿರುವಾಗ ಇಡಿಯ ಬಹಿರಂಗಪಡಿಸುವಿಕೆ ನಡೆದಿದ್ದು ಇದು ರಾಜಕೀಯ ಪ್ರೇರಿತೆಂದು ಎನ್ಸಿಪಿ ವಿರೋಧ ವ್ಯಕ್ತಪಡಿಸಿದೆ.












