ಎನ್.ಆರ್.ಸಿ ಮುಖ್ಯಸ್ಥನನ್ನು ಮಧ್ಯಪ್ರದೇಶಕ್ಕೆ ವರ್ಗಾಯಿಸಲು ಸುಪ್ರೀಂಕೋರ್ಟು ಆದೇಶ

0
542

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ,ಅ.18: ರಾಷ್ಟ್ರೀಯ ಪೌರತ್ವ ಪಟ್ಟಿ ಅಸ್ಸಾಮ್ ಕೋ-ಆರ್ಡಿನೇಟರ್ ಆಗಿರುವ ಪ್ರತೀಕ್ ಹಜೇಲಾರನ್ನು ಮಧ್ಯಪ್ರದೇಶಕ್ಕೆ ವರ್ಗಾಯಿಸುವಂತೆ ಸುಪ್ರೀಂಕೋರ್ಟು ಆದೇಶ ಹೊರಡಿಸಿದೆ.

ಹಜೇಲರ ಜೀವಕ್ಕೆ ಬೆದರಿಕೆ ಇದೆ ಎಂಬ ವರದಿಯ ನಂತರ ವರ್ಗಾವಣೆಗೆ ಆದೇಶ ನೀಡಲಾಗಿದ್ದು ಏಳು ದಿವಸದೊಳಗೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂದು ಸುಪ್ರೀಂಕೋರ್ಟು ಸರಕಾರಕ್ಕೆ ತಿಳಿಸಿದೆ.

ಪ್ರತೀಕ್ ವರ್ಗಾವಣೆಗೆ ಏನಾದರೂ ಕಾರಣ ಇದೆಯೇ ಎಂಬ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಪ್ರಶ್ನೆಗೆ ಕಾರಣವಿಲ್ಲದೆ ವರ್ಗಾವಣೆ ನಡೆಯುವುದಿಲ್ಲ ಎಂದು ಚೀಫ್ ಜಸ್ಟಿಸ್ ಗೊಗೊಯಿ ಹೇಳಿದರು.

48 ವರ್ಷದ ಪ್ರತೀಕ್ 1995ರ ಅಸ್ಸಾಮ-ಮೇಘಾಲಯ ಕೇಡರ್ ಐಎಎಸ್ ಅಧಿಕಾರಿ. ಪ್ರತೀಕ್‍ರ ಮೇಲ್ನೋಟದಲ್ಲಿ ಆಗಸ್ಟ್ 31ಕ್ಕೆ ಅಂತಿಮ ಪೌರತ್ವ ಪಟ್ಟಿ ಪ್ರಕಟವಾಗಿತ್ತು. ಅಂತಿಪಟ್ಟಿಯಿಂದ 19 ಲಕ್ಷ ಮಂದಿ ಹೊರಗುಳಿದಿದ್ದಾರೆ.