ಸನ್ಮಾರ್ಗ ವಾರ್ತೆ
ಮುಂಬೈ,ಅ.18: ಸಾವರ್ಕರ್ಗಿಂತ ದೊಡ್ಡ ಜಾತ್ಯತೀತವಾದಿ ನೋಡಲೇ ಸಾಧ್ಯವಿಲ್ಲ ಎಂದು ಮೊಮ್ಮಗ ರಂಜಿತ್ ಸಾವರ್ಕರ್ ಹೇಳಿದರು.
ಇಂದಿರಾಗಾಂಧಿ ಸಾವರ್ಕರನ್ನು ಅನುಸರಿಸುತ್ತಿದ್ದರು. ಆದ್ದರಿಂದ ಭಾರತವನ್ನು ಪಾಕಿಸ್ತಾನ ಕಾಲಬುಡಕ್ಕೆ ಹಾಕದೆ ದೇಶದ ಸೈನ್ಯವನ್ನು ಬಲಪಡಿಸಿದರು. ನೆಹರೂರ ಗಾಂಧಿ ಆದರ್ಶಗಳಿಗೆ ಇಂದಿರಾರ ಕ್ರಮಗಳು ವಿರುದ್ಧವಾಗಿತ್ತು ಎಂದು ರಂಜಿತ್ ಸಾವರ್ಕರ್ ಹೇಳಿದರು.
ಸಾವರ್ಕರ್ ಭಾರತ ರತ್ನ ಕೊಡಿಸುವ ಯತ್ನಗಳು ಗರಿಕೆದರಿದ ಬೆನ್ನಿಗೆ ಅವರ ಮೊಮ್ಮಗ ರಂಗ ಪ್ರವೇಶಿಸಿದ್ದಾರೆ.
ಆದರೆ, ಸಾವರ್ಕರ್ಗೆ ಭಾರತ ರತ್ನ ನೀಡುವ ಪ್ರಕ್ರಿಯೆಗೆ ಬಿಜೆಪಿ ಸರಕಾರ ಚಾಲನೆ ನೀಡಿರುವುದನ್ನು ಮಾಜಿ ಪ್ರಧಾನಿ ಮನ್ಮೋಹನ್ ಸಿಂಗ್ ವಿರೋಧಿಸಿದ್ದಾರೆ. ಸಾವರ್ಕರ್ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬಹುದೊಡ್ಡ ಪಾತ್ರ ವಹಿಸಿದ್ದರು ಎಂದು ವ್ಯಾಪಕ ಪ್ರಚಾರವನ್ನು ಬಿಜೆಪಿ ಮಾಡುತ್ತಿದೆ. ಗೃಹ ಸಚಿವ ಅಮಿತ್ ಶಾ ಸಹಿತ ಹಲವಾರು ಬಿಜೆಪಿ ನಾಯಕರು ಸಾವರ್ಕರ್ ವಿಚಾರವನ್ನು ಎತ್ತಿಹಿಡಿದಿದ್ದಾರೆ.












