ರಾಹುಲ್, ಪ್ರಿಯಾಂಕಾ ಪೆಟ್ರೋಲ್ ಬಾಂಬುಗಳು – ಬಿಜೆಪಿ ಸಚಿವ

0
399

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಡಿ. 25: ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರು ಪೆಟ್ರೋಲ್ ಬಾಂಬುಗಳೆಂದು ಹರಿಯಾಣದ ಬಿಜೆಪಿ ಸಚಿವ ಹೇಳಿಕೆ ನೀಡಿದ್ದಾರೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿಯವರ ಬಗ್ಗೆ ಎಚ್ಚರವಿರಲಿ. ಅವರು ಜೀವಂತ ಪೆಟ್ರೋಲ್ ಬಾಂಬುಗಳು ಎಂದು ಹರಿಯಾಣ ಗೃಹ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದರು.
“ಅವರಿಬ್ಬರ ಬಗ್ಗೆ ಎಚ್ಚರ ಇರಲಿ. ಅವರು ಎಲ್ಲಿ ಹೋದರೂ ಅಲ್ಲಿ ಬೆಂಕಿ ಕೊಟ್ಟು ನಾಶ ಮಾಡುವರು. ಅವರು ಪೆಟ್ರೋಲ್ ಬಾಂಬುಗಳಂತಿದ್ದಾರೆ” ಎಂದಿದ್ದಾರೆ.

ಪೌರತ್ವ ಕಾನೂನು ವಿರುದ್ಧ ಪ್ರತಿಭಟನೆಯಲ್ಲಿ ಕೊಲ್ಲಲ್ಪಟ್ಟ ಪ್ರತಿಭಟನಾಕಾರರ ಕುಟುಂಬವನ್ನು ಸಂದರ್ಶಿಸಲು ರಾಹುಲ್, ಪ್ರಿಯಾಂಕಾ ಉತ್ತರ ಪ್ರದೇಶ ಮೀರತ್‍ಗೆ ಹೋಗಿದ್ದಾಗ ಅವರನ್ನು ತಡೆಯಲಾಗಿತ್ತು. ಘಟನೆಯ ಹಿನ್ನೆಲೆಯಲ್ಲಿ ಹಿರಿಯ ಬಿಜೆಪಿ ಸಚಿವ ಹೀಗೆ ಅವಮಾನಕಾರಿಯಾಗಿ ಪ್ರತಿಕ್ರಿಯಿಸಿದ್ದಾರೆ.