ಸಿಎಎ ಸಂವಿಧಾನ ವಿರೋಧಿ; ಅದನ್ನು ರದ್ದುಗೊಳಿಸಬೇಕು- ಅಮರ್ತ್ಯ ಸೇನ್

0
876

ಸನ್ಮಾರ್ಗ ವಾರ್ತೆ-

ಹೊಸದಿಲ್ಲಿ, ಜ. 9: ಪೌರತ್ವ ತಿದ್ದುಪಡಿ ಕಾನೂನು ಸಂವಿಧಾನ ವಿರೋಧಿಯಾಗಿದೆ ಎಂದು ನೊಬೆಲ್ ವಿಜೇತ ಅಮರ್ತ್ಯ ಸೇನ್ ಹೇಳಿದರು. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಮತ್ತು ಸುಪ್ರೀಂಕೋರ್ಟು ಮಧ್ಯಪ್ರವೇಶಿಸಿ ಈ ಕಾನೂನು ರದ್ದುಪಡಿಸಬೇಕೆಂದು ಅವರು ಹೇಳಿದರು. ಇನ್ಫೋಸಿಸ್ ಸಯನ್ಸ್ ಪೌಂಡೇಶನ್ ನಡೆಸಿದ ಕಾರ್ಯಕ್ರಮದಲ್ಲಿ ಅವರು ಹೀಗೆ ಹೇಳಿದರು. ನನ್ನ ಅಧ್ಯಯನದ ಪ್ರಕಾರ ಪೌರತ್ವ ತಿದ್ದುಪಡಿ ಕಾನೂನು ಸಂವಿಧಾನ ತತ್ವಗಳನ್ನು ಉಲ್ಲಂಘಿಸುತ್ತಿದೆ. ಧರ್ಮದ ಆಧಾರದಲ್ಲಿ ಪೌರತ್ವ ನೀಡುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಜೆಎನ್‍ಯು ವಿದ್ಯಾರ್ಥಿಗಳ ಮೇಲೆ ನಡೆದ ಹಲ್ಲೆಯ ಕುರಿತು ಪ್ರತಿಕ್ರಿಯಿಸಿದ ಅವರು ಹೊರಗಿನವರು ವಿಶ್ವವಿದ್ಯಾನಿಲಯ ಪ್ರವೇಶಿಸದಂತೆ ತಡೆಯಲು ಅಧಿಕಾರಿಗಳು ವಿಫಲರಾದರು ಎಂದರು. ಯುನಿವರ್ಸಿಟಿ ಮತ್ತು ಪೊಲೀಸರಲ್ಲಿ ಪರಸ್ಪರ ಅಭಿಪ್ರಾಯ ಹಂಚುವಿಕೆ ತಡವಾಯಿತು ಎಂದು ಹೇಳಿದರು.