ಸನ್ಮಾರ್ಗ ವಾರ್ತೆ
ಆಮ್ಸಟರ್ಡಂ, ಜ. 18: ಪರ್ಶಿಯನ್ ಕವಿಗಳ ರಾಜಕುಮಾರ ಎನ್ನಲಾಗುತ್ತಿರುವ ಹಾಫೀಝ್ರ ಪ್ರಸಿದ್ಧ ಕೃತಿಯ ಕೈ ಬರಹದ ಪ್ರತಿ ಪತ್ತೆಯಾಗಿದೆ. ಹತ್ತು ಲಕ್ಷ ಯುರೊ (ಸುಮಾರು ಎಂಟು ಕೋಟಿ ರೂಪಾಯಿ) ಮೌಲ್ಯದ ಗ್ರಂಥವನ್ನು ಡಚ್ ಆರ್ಟ್ ಡಿಟ್ಟಕ್ಟಿವ್ ಅರ್ಥರ್ ಬ್ರಾಂಡ್ ಪತ್ತೆ ಹಚ್ಚಿದ್ದಾರೆ. ಹನ್ನೆರಡು ವರ್ಷಗಳ ಹುಡುಕಾಟದಲ್ಲಿ ದಿವಾನ್ ಅಫ್ ಹಫೀಝ್ ಎಂಬ ಹದಿನೈದು ಶತಮಾನದ ಕೃತಿ ಇದು. 1462-63 ಕಾಲದಲ್ಲಿ ಚಿನ್ನದ ಆವರಣದ ಪುಟಗಳಲ್ಲಿ ಈ ಕೃತಿ ಬರೆಯಲಾಗಿದೆ. ಇದು ಪುಸ್ತಕ ವ್ಯಾಪಾರಿ ಜಾಫರ್ ಖಾಝಿಯವರ ಬಳಿಯಿತ್ತು. 2007ರಲ್ಲಿ ಮ್ಯೂನಿಚ್ನಲ್ಲಿ ವೃದ್ಧಸದನದಲ್ಲಿ ಖಾಝಿ ಮೃತಪಟ್ಟಿದ್ದರು. ನಂತರ ಅಲ್ಲಿಂದ ಪುಸ್ತಕ ಕಾಣೆಯಾಗಿತ್ತು. ಖಾಝಿಯ ಕಂಪ್ಯೂಟರ್ ಪರಿಶೀಲಿಸಿದಾಗ ನೂರಾರು ಕೈಬರಹದ ಪ್ರತಿಗಳು ಕಂಡುಬಂದಿತ್ತು.
ಖಾಝಿಯ ಗೆಳೆಯ ಇರಾನಿ ವ್ಯಕ್ತಿಯ ಜರ್ಮನಿಯ ವಸತಿಯಿಂದ 174 ಪ್ರಾಚೀನ ಕೃತಿಗಳು ಜರ್ಮನ್ ಪೊಲೀಸರು ಪತ್ತೆಹಚ್ಚಿದರು. 2016ರಲ್ಲಿ ದಿವಾನ್ ಆಫ್ ಹಾಫಿಝ್ ಪತ್ತೆ ಹಚ್ಚುವವರಿಗೆ ಜರ್ಮನಿ ಪೊಲೀಸರು 50,000 ಯುರೊ ಬಹುಮಾನ ಘೋಷಿಸಿದ್ದರು. ಇದೇವೇಳೆ ಇರಾನಿನ ಗುಪ್ತಚರ ವಿಭಾಗ ಕೂಡ ಗ್ರಂಥವನ್ನು ಹುಡಕತೊಡಗಿತು. ಪುಸ್ತಕ ಕೈಯಲ್ಲಿಟ್ಟಿದ್ದ ವ್ಯಕ್ತಿ ಇರಾನ್ ತನಿಖಾ ತಂಡಕ್ಕೆ ಹೆದರಿ ಅರ್ಥರ್ ಬ್ರಾಂಡ್ಗೆ ಮಾಹಿತಿ ನೀಡಿದರು. ವಾರಗಳ ಪ್ರಯತ್ನದಿಂದ ಪುಸ್ತಕವನ್ನು ಅವರು ಸಂಗ್ರಹಿಸಿದರು.
ಈಗ ಆಮ್ಸಟರ್ಡ್ಯಾಮ್ನಲ್ಲಿರುವ ದಿವಾನ್ ಆಫ್ ಹಾಫಿಝ್ ಮುಂದಿನವಾರ ಜರ್ಮನ್ ಪೊಲೀಸರಿಗೆ ಕೊಡುವುದಾಗಿ ಆರ್ಥರ್ ಬ್ರಾಮಡ್ ಹೇಳಿದರು. ಖಾಝಿಯ ಕುಟುಂಬ ಸದಸ್ಯರನ್ನು ಭೇಟಿಯಾಗಿ ಪುಸ್ತಕವನ್ನು ವಶದಲ್ಲಿಟ್ಟುಕೊಳ್ಳುವ ಹಕ್ಕನ್ನು ನಿರ್ಧರಿಸಲಾಗುವುದು ಎಂದು ಜರ್ಮನ್ ಪೊಲೀಸರು ತಿಳಿಸಿದರು.












