ಕೇರಳದ ಶಾಲೆಯಲ್ಲಿ ಮತ್ತೆ ಹಾವು ಕಡಿತ: ನಾಲ್ಕನೆ ತರಗತಿ ವಿದ್ಯಾರ್ಥಿನಿ ಲನಾ ಪಾರು

0
853

ಸನ್ಮಾರ್ಗ ವಾರ್ತೆ

ಕಲ್ಲಿಕೋಟೆ, ಜ. 29: ವಿದ್ಯಾರ್ಥಿನಿಯೊಬ್ಬಳಿಗೆ ಹಾವು ಕಡಿತವಾಗಿದೆ. ಕೇರಳ ಚಂದಮಂಗಲ್ಲೂರಿನ ಸರಕಾರಿ ಶಾಲೆಯ ನಾಲ್ಕನೆ ತರಗತಿ ವಿದ್ಯಾರ್ಥಿನಿ ಲನಾ ಎಂಬವಳಿಗೆ ಹಾವು ಕಚ್ಚಿದ್ದು ಜೊತೆಗಿದ್ದ ವಿದ್ಯಾರ್ಥಿ ಕೂಡಲೇ ತಿಳಿಸಿದ್ದರಿಂದ ಅಧ್ಯಾಪಕರು ಹಾವನ್ನು ಹಿಡಿದಿದ್ದರು. ವಿದ್ಯಾರ್ಥಿನಿಯನ್ನು ಮೊದಲು ಮುಕ್ಕಂ ಎಂಬಲ್ಲಿನ ಖಾಸಗಿ ಆಸ್ಪತ್ರೆಗೆ ಮತ್ತು ನಂತರ ಕಲ್ಲಿಕೋಟೆ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವು ಮರದ ಮೇಲಿನಿಂದ ತರಗತಿಗೆ ಬಂದಿತ್ತು. ಸೋಮವಾರ ಬೆಳಗ್ಗೆ ಶಾಲೆಯಲ್ಲಿ ನಡೆಯುವ ಎಲ್ ಎಸ್‍ಎಸ್ ಪರೀಕ್ಷೆಗಾಗಿ ಕಲಿಯಲು ಲನಾ ಬೇಗನೆ ತರಗತಿಗೆ ಬಂದಿದ್ದಳು. ಬಾಗಿಲು ತೆರೆಯುತ್ತಿದ್ದಂತೆ ಬೆಳಗ್ಗೆ 8.45ಕ್ಕೆ ಹಾವಿನ ಕಡಿತ ನಡೆದಿತ್ತು. ಹಾವನ್ನು ಹಿಡಿದು ಮೆಡಿಕಲ್ ಕಾಲೇಜಿಗೆ ತರಲಾಯಿತು. ವಿಷವಿಲ್ಲದ ಹಾವೆಂದು ಮನವರಿಕೆಯಾದ ಬಳಿಕ ಆತಂಕಕ್ಕೆ ತೆರೆಬಿದ್ದಿದೆ. 24 ಗಂಟೆ ನಿಗಾದಲ್ಲಿ ಇರಿಸಿ ವಿದ್ಯಾರ್ಥಿನಿಯನ್ನು ಮಂಗಳವಾರ ಬೆಳಗ್ಗೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.