ಸನ್ಮಾರ್ಗ ವಾರ್ತೆ
ತಿರುವನಂತಪುರಂ, ಜ. 29: ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ನೀತಿ ಘೋಷಣಾ ಭಾಷಣದಲ್ಲಿ ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಸಿಎಎ ವಿರುದ್ಧ ಪರಾಮರ್ಶೆಯನ್ನು ವಾಚಿಸಿದ್ದಾರೆ. ರಾಜ್ಯಪಾಲರು ತನ್ನ ಭಾಷಣದಲ್ಲಿ ಸಿಎಎ ವಿರುದ್ಧ ಪರಾಮರ್ಶೆ ನೀಡಿದರು. ಮುಖ್ಯಮಂತ್ರಿಯ ಆಗ್ರಹದಂತೆ ಓದಿದ್ದೇನೆ ಎಂದು ರಾಜ್ಯಪಾಲರು ತಿಳಿಸಿದ್ದಾರೆ. ಪೌರತ್ವ ಧರ್ಮಾಧಾರಿತವಾಗಿ ಮಾಡಬಾರದೆಂದು ರಾಜ್ಯ ಸರಕಾರದ ನೀತಿಯನ್ನು ತನ್ನ ಭಾಷಣದಲ್ಲಿ ರಾಜ್ಯಪಾಲರು ಹೇಳಿದರು. ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಬೇಕೆಂದು ನೀತಿ ಘೋಷಣಾ ಭಾಷಣದಲ್ಲಿ ಅವರು ಉದ್ಧರಿಸಿದರು. ಇದೇ ಕಾನೂನಿನ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ ಕೇರಳ ಸರಕಾರದ ವಿರುದ್ಧ ತನ್ನ ಭಾಷಣದಲ್ಲಿ ಸರಿಯೆಂದು ಸೂಚಿಸಿದ್ದಾರೆ. ಕೇಂದ್ರ ಆಳುವವರ ತಪ್ಪಾದ ನೀತಿಯು ಅರ್ಥವ್ಯವಸ್ಥೆಯನ್ನು ಬಾಧಿಸುತ್ತಿದೆ ಎಂದು ರಾಜ್ಯಪಾಲರು ಹೇಳಿದರು.
ಸಿಎಎಯ ವಿರುದ್ಧ ಹೇಳಿಕೆಯನ್ನು ಓದಬೇಕೆಂದು ಮುಖ್ಯಮಂತ್ರಿ ಬೆಳಗ್ಗೆ ರಾಜ್ಯಪಾಲರಿಗೆ ಪತ್ರ ನೀಡಿದ್ದರು ಎನ್ನಲಾಗಿದೆ. ಸಿಎಎಯ ಹೇಳಿಕೆ ಓದುವುದರ ಅಗತ್ಯವನ್ನು ವಿವರಿಸಿದ್ದರು.












