ಸನ್ಮಾರ್ಗ ವಾರ್ತೆ
ದೆಹಲಿ; ಫೆ. 1- ದೆಹಲಿಯ ಶಾಹೀನ್ ಬಾಗ್ ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಪ್ರತಿಭಟನಾ ಸ್ಥಳದ ಬಳಿ ಬಂದೂಕು ಮೊಳಗಿದೆ. ಶೂಟರ್‌ನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಸಂಜೆ 4:53 ರ ಸುಮಾರಿಗೆ ಸಂಭವಿಸಿದ ಈ ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.
“ಬಂಧಿತ ವ್ಯಕ್ತಿಯ ಹೆಸರು ಕಪಿಲ್ ಗುಜ್ಜರ್ ಎಂದಾಗಿದ್ದು, ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿದ್ದಾನೆ ಎನ್ನಲಾಗಿದೆ. ಪೊಲೀಸರು ತಕ್ಷಣವೇ ಅವನನ್ನ ಬಂಧಿಸಿದರು ಎಂದು ದೆಹಲಿ ಡಿಸಿಪಿ ಚಿನ್ಮಯ್ ಬಿಸ್ವಾಲ್ ಎಎನ್ಐಗೆ ತಿಳಿಸಿದ್ದಾರೆ. ಪಿಟಿಐ ಪ್ರಕಾರ, ವ್ಯಕ್ತಿ ಪ್ರತಿಭಟನಾ ಸ್ಥಳದ ವೇದಿಕೆಯ ಹಿಂದಿನಿಂದ ಗುಂಡು ಹಾರಿಸಿದ್ದಾನೆ.
ಗುಂಡು ಹಾರಿಸುವಾಗ ನಾವು ಹಿಡಿದೆವೆಂದು ಪೊಲೀಸರು ಹೇಳಿದರೂ ಆತನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪಿಟಿಐ ಹೇಳಿದೆ. ಇಂಡಿಯಾ ಟುಡೆ ಟಿವಿ ವರದಿಗಾರ ಮಿಲನ್ ಶರ್ಮಾ ಅವರು ಟ್ವೀಟ್ ಮಾಡಿದ ವೀಡಿಯೊದಲ್ಲಿ, “ಇಸ್ ದೇಶ್ ಮೇ ಕಿಸಿ ಕಿ ನಹೀಂ ಚಲೇಗಿ, ಸಿರ್ಫ್ ಹಿಂದೂ೦ಕಿ ಚಲೇಗಿ” ಎಂದು ಶೂಟರ್ ಹೇಳುವುದನ್ನು ಕೇಳಬಹುದು (ಈ ದೇಶದಲ್ಲಿ ಹಿಂದೂಗಳು ಏನು ಹೇಳುತ್ತಾರೋ ಅದುವೇ ನಡೆಯುತ್ತದೆ).
ಪ್ರತ್ಯಕ್ಷದರ್ಶಿಗಳ ಪ್ರಕಾರ, ಆತ ಗಾಳಿಯಲ್ಲಿ ಗುಂಡು ಹಾರಿಸುವ ಮೊದಲು ಜಾಗವನ್ನು ಖಾಲಿ ಮಾಡುವಂತೆ ಶಹೀನ್ ಬಾಗ್ ಪ್ರತಿಭಟನಾಕಾರರಿಗೆ ಬೆದರಿಕೆ ಹಾಕಿದ್ದಾನೆ.
ಈತ ಉತ್ತರ ಪ್ರದೇಶದ ನೋಯ್ಡಾ ಸಮೀಪದ ಪೂರ್ವ ದೆಹಲಿಯ ಡಲ್ಲುಪುರ ಗ್ರಾಮದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
Another incident of firing this time at Shaheen Bagh. Police took the man into custody. But n out before he said – “is desh main sirf hinduon ki chalegi aur kissi ki nahi chalegi” pic.twitter.com/SGA9FJGWBK
— Milan Sharma (@Milan_reports) February 1, 2020












