ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 1: ಜಾಮಿಅ ಮಿಲ್ಲಿಯ ವಿಶ್ವವಿದ್ಯಾನಿಲಯದ ಮುಂದೆ ನಡೆದ ಗುಂಡು ಹಾರಾಟ ಘಟನೆಗೆ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದು ನಾವು ಮಕ್ಕಳಿಗೆ ಪೆನ್ನು ಕೊಡುತ್ತಿರುವಾಗ ಕೆಲವರು ಕೋವಿ ಕೊಡುತ್ತಿದ್ದಾರೆ ಎಂದು ಹೇಳಿದರು.
ನಮ್ಮ ಪಾರ್ಟಿ ಮಕ್ಕಳಿಗೆ ಪೆನ್ನು, ಕಂಪ್ಯೂಟರ್ ಕೊಡುತ್ತಿದೆ. ಅವರನ್ನು ಭವಿಷ್ಯದ ಕುರಿತು ಕನಸು ಕಾಣುವಂತೆ ಪ್ರೇರೇಪಿಸುತ್ತಿದೆ. ಆದರೆ ಇತರ ಕೆಲವರು ಮಕ್ಕಳಿಗೆ ಕೋವಿ ಕೊಡುತ್ತಿದ್ದಾರೆ. ಮಕ್ಕಳಲ್ಲಿ ದ್ವೇಷ ತುಂಬುತ್ತಿದ್ದಾರೆ ಎಂದು ಆರೋಪಿಸಿದರು. ಜಾಮಿಅ ಮಿಲ್ಲಿಯ ವಿದ್ಯಾಥಿಗಳ ಮೇಲೆ ಕಳೆದ ದಿವಸ ರಾಂಭಕ್ತ್ ಗೋಪಾಲ್ ಗುಂಡು ಹಾರಿಸಿದ್ದ. ಇದರಲ್ಲಿ ಒಬ್ಬ ವಿದ್ಯಾರ್ಥಿ ಗಾಯಗೊಂಡಿದ್ದಾರೆ. ಇದರ ವಿರುದ್ಧ ವ್ಯಾಪಕ ಪತ್ರಿಭಟನೆ ಕಾಣಿಸಿಕೊಂಡಿದ್ದು ಈ ನಡುವೆ ಕೇಜ್ರಿವಾಲ್ ಈ ಹೇಳಿಕೆ ನೀಡಿದ್ದಾರೆ. ಇವತ್ತು ಶಾಹೀನ್ ಬ್ಯಾಗ್ ಪ್ರತಿಭಟನಾಕಾರಾರಿರುವ ಸ್ಥಳದ ಮೇಲೂ ಗುಂಡಿನ ದಾಳಿ ನಡೆದಿದೆ.












