ಶಾಹಿನ್‍ಬಾಗ್, ಜಾಮಿಅ ಗುಂಡು ಹಾರಾಟ: ದಿಲ್ಲಿ ಡೆಪ್ಯುಟಿ ಕಮಿಶನರ್ ರನ್ನು ಬದಲಾಯಿಸಿದ ಚುನಾವಣಾ ಆಯೋಗ

0
1928

ಸನ್ಮಾರ್ಗ ವಾರ್ತೆ

ಹೊಸದಿಲ್ಲಿ, ಜ. 3: ಶಾಹಿನ್‍ ಬಾಗ್, ಜಾಮಿಅ ಗುಂಡು ಹಾರಾಟದ ಘಟನೆಯ ಹಿನ್ನೆಲೆಯಲ್ಲಿ ದಿಲ್ಲಿಯ ಡೆಪ್ಯುಟಿ ಪೊಲೀಸ್ ಕಮಿಶನರ್ ಚಿನ್ಮಯ್ ಬಿಸ್ವಾಲ್‍ನ್ನು ಚುನಾವಣಾ ಆಯೋಗ ಬದಲಾಯಿಸಿದೆ. ಅವರ ಬದಲಿಗೆ ಅಡಿಶನಲ್ ಡಿಎಸ್ಪಿ ಕುಮಾರ್ ಗಣೇಶನ್‍ ಗೆ ಹೊಣೆ ವಹಿಸಿ ಕೊಡಲಾಗಿದೆ.

ಪೌರತ್ವ ತಿದ್ದುಪಡಿ ಕಾನೂನು ವಿರುದ್ಧ ಹೋರಾಟ ನಡೆಯುವ ಶಾಹೀನ್ ಬಾಗ್, ಜಾಮಿಯ ಮಿಲ್ಲಿಯ ವಿಶ್ವವಿದ್ಯಾನಿಲಯದಲ್ಲಿ ನಡೆದಿದ್ದ ಗುಂಡು ಹಾರಾಟ ಘಟನೆಯ ಹಿನ್ನೆಲೆಯಲ್ಲಿ ಅವರನ್ನು ವರ್ಗಾಯಿಸಲಾಗಿದೆ. ಚಿನ್ಮಯ್ ಬಿಸ್ವಾಲ್‍ರಿಗೆ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ನೀಡಲು ಚುನಾವಣಾ ಆಯೋಗ ಸೂಚಿಸಿದೆ.

ಹೊಸ ಡಿಎಸ್‍ಪಿ ನೇಮಕಗೊಳಿಸಲು ತುರ್ತಾಗಿ ಮೂವರ ಪಟ್ಟಿಯನ್ನು ಕೊಡುವಂತೆ ದಿಲ್ಲಿ ಪೊಲೀಸ್‍ಗೆ ಚುನಾವಣಾ ಆಯೋಗ ನಿರ್ದೇಶಿಸಿದೆ. ಪರಿಸ್ಥಿತಿಯನ್ನು ಅವಲೋಕಿಸುವುದಕ್ಕಾಗಿ ದಿಲ್ಲಿ ಮುಖ್ಯ ಚುನಾವಣಾ ಕಮಿಶನರ್ ರನ್‍ಬೀರ್ ಸಿಂಗ್ ರವಿವಾರ ಶಾಹೀನ್ ಬಾಗ್ ಸಂದರ್ಶಿಸಿದ್ದರು.