ಸನ್ಮಾರ್ಗ ವಾರ್ತೆ
ಕಣ್ಣೂರ್, ಫೆ.19: ಒಂದೂವರೆ ವರ್ಷದ ಮಗುವನ್ನು ಕೊಂಡ ಆರೋಪದಲ್ಲಿ ಮಗುವಿನ ತಾಯಿ ಶರಣ್ಯ ಎಂಬಾಕೆಯನ್ನು ಸಾಕ್ಷ್ಯ ಸಂಗ್ರಹಕ್ಕೆ ಕರೆತರಲಾಗಿದ್ದು ಈ ವೇಳೆ ಆಕೆಯ ಸಂಬಂಧಿಕರು ಮತ್ತು ಊರವರು ಗುಂಪು ಸೇರಿ ಆಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಗೆ ಸಾಕ್ಷ್ಯ ಸಂಗ್ರಹಿಸಲು ಕರೆತಂದಾಗ ಶರಣ್ಯಳ ತಾಯಿ, ತಂದೆ ಕೈ ಏರಿಸುತ್ತಾ ಓಡಿ ಬಂದರು. ಸೋಮವಾರ ಬೆಳಗ್ಗೆ ಮಲಗುವ ಕೋಣೆಯಿಂದ ಮಗು ವಿಯಾನ ಕಾಣೆಯಾಗಿದ್ದ. ನಂತರ ನದಿತೀರದಲ್ಲಿ ಮೃತ ಸ್ಥಿತಿಯಲ್ಲಿ ಕಂಡು ಬಂದಿದ್ದ. ಬಂಡೆಕಲ್ಲಿನ ಎಡೆಯಲ್ಲಿ ತಲೆ ಸಿಕ್ಕಿಕೊಂಡ ರೀತಿಯಲ್ಲಿ ಮೃತದೇಹ ಕಂಡು ಬಂದಿತ್ತು. ಪೋಸ್ಟ್ ಮಾರ್ಟಂ ವರದಿಯಲ್ಲಿ ತಲೆಗೆ ಬಿದ್ದ ಏಟು ಸಾವಿಗೆ ಕಾರಣವೆಂದು ತಿಳಿದು ಬಂದಿತ್ತು. ನಂತರ ಶರಣ್ಯಳನ್ನು ಪ್ರಶ್ನಿಸಿದಾಗ ಮಗುವನ್ನು ತಾನೇ ಕೊಲೆ ಮಾಡಿದೆ ಎಂದು ಪೊಲೀಸರ ಮುಂದೆ ಒಪ್ಪಿಕೊಂಡಿದ್ದಳು.
ಶರಣ್ಯ ತನ್ನ ಪ್ರೇಮಿಯೊಂದಿಗೆ ಜೀವಿಸಲಿಕ್ಕಾಗಿ ಮಗುವಿನ ದಾರುಣ ಹತ್ಯೆ ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಶರಣ್ಯಳ ಬಟ್ಟೆ ಮತ್ತು ಮಲಗಿದ ಬೆಡ್ಶೀಟ್ನಲ್ಲಿ ಸಮುದ್ರ ನೀರಿನ ಅಂಶ ಪತ್ತೆಯಾಗಿದೆ. ಎರಡು ಬಾರಿ ಬಂಡೆಕಲ್ಲನ್ನು ಮಗುವಿನ ತಲೆಗೆ ಅಪ್ಪಳಿಸಿ ಕೊಲೆ ಮಾಡಿದ್ದಾಗಿ ಶರಣ್ಯ ತಿಳಿಸಿದ್ದಾಳೆ.












