ಸನ್ಮಾರ್ಗ ವಾರ್ತೆ
ಹೊಸದಿಲ್ಲಿ, ಫೆ. 27: ದಿಲ್ಲಿಯಲ್ಲಿ ಗಲಭೆಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ದಿಲ್ಲಿ ಹೈಕೋಟು ಜಡ್ಜ್ ಜಸ್ಟಿಸ್ ಎಸ್. ಮುರಳೀಧರನ್ರನ್ನು ಪಂಜಾಬ್-ಹರಿಯಾಣ ಹೈಕೋರ್ಟಿಗೆ ವರ್ಗಾಯಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ದಿಲ್ಲಿ ಗಲಭೆಗೆ ಕಾರಣವಾದ ದ್ವೇಷಪೂರಿತ ಭಾಷಣ ಮಾಡಿದ ಮೂವರು ಬಿಜೆಪಿ ನಾಯಕರ ವಿರುದ್ಧ ಕೇಸು ದಾಖಲಿಸಲು ಜಸ್ಟಿಸ್ ಮುರಳೀಧರನ್ ಬುಧವಾರ ಆದೇಶಿಸಿದ್ದರು. ಪ್ರಚೋದನಾಕಾರೀ ಭಾಣದ ವೀಡಿಯೊವನ್ನು ಪರಿಶೀಲಿಸಿ ಕೇಸು ದಾಖಲಿಸಲು ದಿಲ್ಲಿ ಪೊಲೀಸ್ ಕಮಿಶನರ್ ಗೆ ಜಸ್ಟಿಸ್ ಮುರಳೀಧರನ್ ಸೂಚಿಸಿದ್ದರು. ಕಪಿಲ್ ಮಿಶ್ರ, ಕೇಂದ್ರ ಸಚಿವ ಅನುರಾಗ್ ಠಾಕೂರ್, ಸಂಸದ ಪರ್ವೇಶ್ ವರ್ಮ, ಶಾಸಕ ಅಭಯ್ ವರ್ಮ ರ ವಿರುದ್ಧ ಕೇಸು ದಾಖಲಿಸುವುದನ್ನು ಪರಿಶೀಲಿಸಬೇಕೆಂದು ಜಡ್ಜ್ ಹೇಳಿದ್ದರು. ಇದರ ಬೆನ್ನಿಗೆ ಅರ್ಜಿ ವಿಚಾರಣೆಯನ್ನು ಹೈಕೋರ್ಟಿನ ಚೀಫ್ ಜಸ್ಟಿಸ್ ಪೀಠಕ್ಕೆ ವರ್ಗಾಯಿಸಲಾಗಿತ್ತು. ಇದರ ನಂತರ ಜಸ್ಟಿಸ್ ಎಸ್. ಮುರಳೀಧರನ್ರಿಗೆ ವರ್ಗಾವಣೆ ಆದೇಶ ಕಳುಹಿಸಲಾಗಿದೆ.
2006ರಿಂದ ಅವರು ದಿಲ್ಲಿ ಹೈಕೋರ್ಟಿನ ನ್ಯಾಯಾಧೀಶರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರನ್ನು ಪಂಜಾಬ್-ಹರ್ಯಾಣ ಹೈಕೋರ್ಟಿಗೆ ವರ್ಗಾಯಿಸಲು ಕಳೆದ ವಾರ ಸುಪ್ರೀಂಕೋರ್ಟು ಕೊಲಿಜಿಯಂ ಸೂಚಿಸಿತ್ತು ಎಂದು ತಿಳಿದು ಬಂದಿದೆ.












