ಸನ್ಮಾರ್ಗ ವಾರ್ತೆ
ರಿಯಾದ್, ಮಾ. 23: ಸೌದಿ ದೊರೆ ಸಲ್ಮಾನ್ ದೇಶದಲ್ಲಿ ಕರ್ಫ್ಯೂ ಘೋಷಿಸಿದ್ದಾರೆ. ಎಲ್ಲ ದಿನವೂ ಸಂಜೆ ಏಳರಿಂದ ಬೆಳಗ್ಗೆ ಆರರವರೆಗೆ ಮುಂದಿನ 21 ದಿನದವರೆಗೆ ಕರ್ಫ್ಯೂ ಇರಲಿದೆ. ಈ ಸಮಯದಲ್ಲಿ ಅಗತ್ಯ ಸೇವೆ ಹೊರತುಪಡಿಸಿ ಎಲ್ಲ ಸಂಸ್ಥೆಗಳು ಮುಚ್ಚಬೇಕು. ಜನರು ಹೊರಗೆ ಬರಬಾರದೆಂದು ಆದೇಶ ನೀಡಿದ್ದಾರೆ. ವಾಹನಗಳು ಹೊರಗೆ ಬರದು. ಆದರೆ ಆರೋಗ್ಯ ಕ್ಷೇತ್ರ, ಸುರಕ್ಷಾ ವಿಭಾಗ, ಸೇನೆ, ಮಾಧ್ಯಮಗಳಿಗೆ ಕರ್ಫ್ಯೂನಿಂದ ವಿನಾಯಿತಿ ಇರಲಿದೆ.
ಕೊರೊನಾ ಹರಡದಿರಲು ಎಲ್ಲರೂ ಎಚ್ಚರ ವಹಿಸಬೇಕು ಎಂದು ದೊರೆ ಸಲ್ಮಾನ್ ಆದೇಶದಲ್ಲಿ ತಿಳಿಸಿದ್ದಾರೆ. ಕರ್ಫ್ಯೂ ಪಾಲಿಸುವರೋ ಎಂದು ಪರಿಶೀಲಿಸಲು ಗೃಹ ಸಚಿವಾಲಯದ ಅಧೀನದ ಸುರಕ್ಷಾ ವಿಭಾಗ ಪರಿಶೀಲಿಸುತ್ತಿದೆ.












