ಸನ್ಮಾರ್ಗ ವಾರ್ತೆ
ಮುಂಬೈ, ಮಾರ್ಚ್ 29- ಕೊರೋನಾವನ್ನು ನಿರ್ಲಕ್ಷಿಸಿದ ಕಾರಣ ಮುಂಬೈಯ 82 ವರ್ಷದ ವೈದ್ಯರೊಬ್ಬರ ಸಾವಿಗೀಡಾಗಿದ್ದಾರೆ. ಮನೆಯಲ್ಲಿ ತಜ್ಞ ವೈದ್ಯರಿದ್ದಾರೆ ಎಂಬ ಅತಿ ಆತ್ಮವಿಶ್ವಾಸವು ಈ ಸಾವಿಗೆ ಕಾರಣ ಎಂದು ಹೇಳಲಾಗುತ್ತಿದೆ.
ಕೊರೋನಾ ದೃಢಗೊಂಡ ಬಳಿಕ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿ ಇದ್ದಾಗಲೇ ಅವರ ಸಾವು ಸಂಭವಿಸಿದೆ. ಮನೆಯಲ್ಲಿ ತಜ್ಞ ವೈದ್ಯರಿದ್ದಾರೆ ಎಂಬ ಕುಟುಂಬದ ಅತಿ ಆತ್ಮವಿಶ್ವಾಸವು ಈ ಸಾವಿಗೆ ಕಾರಣವೆಂದು ಮುಂಬೈ ಪೊಲೀಸರು ಮತ್ತು ಮುಂಬೈ ನಗರಸಭಾ ಆರೋಗ್ಯ ಇಲಾಖೆಯ ಸಿಬ್ಬಂದಿಗಳು ಹೇಳಿದ್ದಾರೆ.
ಇಂಗ್ಲೆಂಡಿನಿಂದ ಮುಂಬೈ ವಿಮಾನ ನಿಲ್ದಾಣಕ್ಕೆ ಮಾರ್ಚ್ 12ರಂದು ಆಗಮಿಸಿದ್ದ ಕಿರಿಯ ಮಗನಿಂದ ಇವರಿಗೆ ಕೊರೋನಾ ಹರಡಿತ್ತು. ಆದರೆ ಮನೆಯಲ್ಲಿ ತಜ್ಞ ವೈದ್ಯರಿದ್ದಾರೆ ಎಂಬ ಕಾರಣವನ್ನು ನೀಡಿ ಆತನನ್ನು ಸರಕಾರಿ ಆಸ್ಪತ್ರೆಗೆ ಕಳುಹಿಸದೆ ಕುಟುಂಬವು ತನ್ನ ಮನೆಗೆ ಕರೆದುಕೊಂಡು ಹೋಗಿತ್ತು.
ಮೃತಪಟ್ಟ ವೈದ್ಯರ ಓರ್ವ ಮಗ ಸರಕಾರಿ ಆಸ್ಪತ್ರೆಯಲ್ಲಿ ಹೃದ್ರೋಗ ತಜ್ಞರಾಗಿದ್ದಾರೆ. ಮನೆಯಲ್ಲಿ ಕಿರಿಯ ಮಗನಿಂದ ಅಂತರವನ್ನು ಪಾಲಿಸಿದ್ದೇವೆ ಎಂದು ಕುಟುಂಬ ಹೇಳಿದೆ.












