ಡಾ.ಭರತ್ ಶೆಟ್ಟಿ ವಿರುದ್ದ ಕಾನೂನು ಕ್ರಮಕ್ಕೆ‌ ವಲ್ಪೇರ್ ಪಾರ್ಟಿ ಆಗ್ರಹ

0
761

ಸನ್ಮಾರ್ಗ ವಾರ್ತೆ

ಮಂಗಳೂರು: ದ.ಕ ಜಿಲ್ಲಾಡಳಿತವು ಕೋರೋನ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಪಚ್ಚನಾಡಿ‌ ರುದ್ರ ‌ಭೂಮಿಯಲ್ಲಿ ನಡೆಸುವುದನ್ನು‌ ತಡೆದ ಮತ್ತು ಆಕ್ರಮ‌ವಾಗಿ ಜನರನ್ನು ಸೇರಿಸಿ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆಯ ಕರ್ತವ್ಯಕ್ಕೆ ಅಡ್ಡಿಪಡಿಸಿದ ಮಂಗಳೂರು‌ ಉತ್ತರ ಶಾಸಕ‌ ಡಾ‌.ಭರತ್‌‌ ಶೆಟ್ಟಿಯ ವಿರುದ್ದ ಜಿಲ್ಲಾಡಳಿತ ಕಾನೂನು‌ ಕ್ರಮಕೈಗೊಳ್ಳಬೇಕೆಂದು‌ ವೆಲ್ಪೇರ್ ಪಕ್ಷದ ದ.ಕ‌ ಜಿಲ್ಲಾಧ್ಯಕ್ಷ ಸುಲೈಮಾನ್ ಕಲ್ಲರ್ಪೆ ಒತ್ತಾಯಿಸಿದ್ದಾರೆ. ‌

ಶಾಸಕರ ಈ ವರ್ತನೆ‌ ಮನುಷ್ಯ ಕುಲಕ್ಕೆ ನಾಚಿಕೆಗೇಡು. ಇಡೀ ರಾಜ್ಯಕ್ಕೆ ಜಿಲ್ಲೆಯ ಕುರಿತು ನಕಾರಾತ್ಮಕ ಸಂದೇಶ ಸಾರಿದೆ ಎಂದು ಜಿಲ್ಲಾಧ್ಯಕ್ಷ ಖೇದವನ್ನು ವ್ಯಕ್ತಪಡಿಸಿ, ಸಾಂಕ್ರಾಮಿಕ ‌ಕಾಯಿಲೆ ಕಾಯಿದೆ 1897 ಇದರ ತಿದ್ದುಪಡಿ (ಸುಗ್ರಿವಾಜ್ಞೆ) ಪ್ರಕಾರ ಸ್ಮಶಾನದಲ್ಲಿ ಕೊವೀಡ್ ಅಧಿಕಾರಿಗಳಿಗೆ ಕರ್ತವ್ಯ ಅಡ್ಡಿ ಪಡಿಸುವುದು ಅಕ್ಷಮ್ಯ ಅಪರಾಧವಾಗಿದೆ. ಜಿಲ್ಲಾಡಳಿತ ಪಕ್ಷಾತೀತವಾಗಿ‌ ಶಾಸಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.