ದನ ಕೂಗು ನಿಲ್ಲಿಸಲಿಲ್ಲ; ಕಳ್ಳರು ಓಡಿ ಪಾರಾದರು…!

0
1646

ಸನ್ಮಾರ್ಗ ವಾರ್ತೆ

ವಂಡೂರು, ಎ. 27: ಮಧ್ಯ ರಾತ್ರೆ ದನ ಕದಿಯಲು ಕಳ್ಳರು ಬಂದರು. ಕಳ್ಳರನ್ನು ನೋಡಿದ ದನ ಆಳತೊಡಗಿದ್ದು ನಿಲಿಸಲಿಲ್ಲ. ಅಂಗಪ್ಪೊಯಿಯ ರುಕಿಯಾ ಎಂಬವರ ಕರುಹಾಕಿದ ದನಕ್ಕೆ ಕಣ್ಣುಹಾಕಿದ್ದ ಕಳ್ಳರು ರಾತ್ರೆಯ ಸಮಯದಲ್ಲಿ ಬಂದಿದ್ದರು. ಹಾಲು ನೀಡುತ್ತಿದ್ದ ಮೂರು ದನಗಳಲ್ಲಿ ಒಂದನ್ನು ಬೆಳಗ್ಗೆ 3: 30ಕ್ಕೆ ಹಟ್ಟಿಯಿಂದ ಕೊಂಡು ಹೋಗಿ ರಸ್ತೆ ಬದಿ ಕಟ್ಟಿ ಎರಡನೆಯದನ್ನು ಕಟ್ಟುಬಿಚ್ಚಿಸಿ ಕೊಂಡು ಹೋಗಲು ಕಳ್ಳರು ಪ್ರಯತ್ನಿಸಿದರು.

ಆದರೆ ಕಟ್ಟು ಬಿಚ್ಚಲ್ಪಟ್ಟ ದನ ನಿರಂತರ ಅಳತೊಡಗಿತು. ದನದ ಅಳು ಕೇಳಿ ಅದರ ಒಡತಿ ರುಕಿಯ ಎಚ್ಚೆತ್ತರು. ಅವರು ಎದ್ದದ್ದು ಗೊತ್ತಾಗಿ ಕಳ್ಳರು ದನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಅವರು ಹಾಲು ನೀಡುವ ದನಗಳನ್ನು ಸಾಕಿ ತನ್ನ ಕುಟುಂಬ ಉದರ ಪೋಷಣೆ ಮಾಡುತ್ತಾರೆ. ಕೆಲವು ದಿನದ ಹಿಂದೆ ಕೆಲವರು ದನ ಮಾರುತ್ತೀರಾ ಎಂದು ಕೇಳುತ್ತಾ ಮನೆಗೆ ಬಂದಿದ್ದರು. ಇವರದೇ ಕೆಲಸ ಇದು ಎಂದು ರುಕಿಯ ಶಂಕಿಸಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.