ದ ಕ ಜಿಲ್ಲೆಯಲ್ಲಿ ಕೊರೋನಾಕ್ಕೆ 5ನೇ ಬಲಿ: ಕುಲಶೇಖರದ ಮಹಿಳೆ ಸಾವು

0
965

ಸನ್ಮಾರ್ಗ ವಾರ್ತೆ

ಮಂಗಳೂರು ಮೇ 14- ಮಂಗಳೂರಿನಲ್ಲಿ ಕೊರೋನಾದಿಂದಾಗಿ ಮತ್ತೊಂದು ಸಾವು ಸಂಭವಿಸಿದೆ. ಜಿಲ್ಲೆಯ ತೊಕ್ಕೊಟ್ಟು ಸಮೀಪದ ದಾರಂದಬಾಗಿಲು ಎಂಬಲ್ಲಿಯ 38 ವರ್ಷದ ಮಹಿಳೆಗೆ ಬುಧವಾರವಷ್ಟೇ ಕೊರೋನಾ ದೃಢಗೊಂಡಿರುವುದು ಪತ್ತೆಯಾಗಿ ಆತಂಕದಲ್ಲಿರುವ ಜನರಿಗೆ ಇವತ್ತು ಗುರುವಾರ ಸಾವಿನ ಸುದ್ದಿಯನ್ನು ಅರಗಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.

ಕೊರೋನಾ ಸೋಂಕಿತ ರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಲಶೇಖರದ 80 ವರ್ಷ ವಯಸ್ಸಿನ ವೃದ್ದೆ ಗುರುವಾರ ಮೃತಪಟ್ಟಿದ್ದಾರೆ. ಇದು ಜಿಲ್ಲೆಯಲ್ಲಿ ಕೊರೋನಾಕ್ಕೆ ಐದನೇ ಬಲಿ. ಎಲ್ಲರ ಸಾವಿಗೂ ಪಡೀಲ್ ಹತ್ತಿರದ ಫಸ್ಟ್ ನ್ಯೂರೋ ಆಸ್ಪತ್ರೆಗೂ ನಂಟಿರುವುದು ಜಿಲ್ಲೆಯನ್ನು ತಳಮಳಕ್ಕೆ ದೂಡಿದೆ.

ವಿಶೇಷ ಏನೆಂದರೆ ಜಿಲ್ಲೆಯಲ್ಲಿ ಮೃತಪಟ್ಟವರೆಲ್ಲಾ ಮಹಿಳೆಯರೇ ಆಗಿದ್ದು ಕುಲಶೇಖರದ ಮಹಿಳೆಯ ಆರೋಗ್ಯ ಬಿಗಡಾಯಿಸಿ ವೆಂಟಿಲೇಟರ್ ನ ಮೂಲಕ ಚಿಕಿತ್ಸೆ ನೀಡಲಾಗಿತ್ತು. ಫಸ್ಟ್ ನ್ಯೂರೋ ಆಸ್ಪತ್ರೆಯಿಂದ ಸೋಂಕಿತರಾದವರ ಸಂಖ್ಯೆ 20 ಆಗಿದ್ದು ಜಿಲ್ಲೆಯಲ್ಲಿ ಒಟ್ಟು ಕೊರೋನಾ ಪ್ರಕರಣ 34ಕ್ಕೆ ಏರಿಕೆಯಾಗಿದೆ. ಸಕ್ರಿಯ 17 ಪ್ರಕರಣಗಳಿದ್ದು, ಇವರಲ್ಲಿ 14 ಮಂದಿ ಗುಣಮುಖರಾಗಿ 16 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.