ಕೊರೋನಾ ಆಘಾತದಿಂದ ಸಮಾಜದಲ್ಲಿ ಹೊಸ ಬದಲಾವಣೆ- ಜಸ್ಟೀನ್ ಟ್ರುಡೊ

0
459

ಸನ್ಮಾರ್ಗ ವಾರ್ತೆ

ಒಟ್ಟಾವಾ,ಮೇ.15: ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಕೊರೋನಾದ ಆಘಾತ ಸಮಾಜದಲ್ಲಿ ಹೊಸ ಬದಲಾವಣೆಯನ್ನು ತರಬಹುದು ಎಂದು ಅಭಿಪ್ರಾಯ ಪ್ರಕಟಿಸಿದ್ದಾರೆ. ವೈರಸ್ ವಿರುದ್ಧ ಪ್ರತಿರೋಧ ಮದ್ದು ಕಂಡು ಹಿಡಿಯುವವರೆಗೆ ಜನರು ತಮ್ಮ ಅಭ್ಯಾಸಗಳಲ್ಲಿ ಬದಲಾವಣೆ ಮಾಡಿಕೊಳ್ಳಬೇಕೆಂದು ಟ್ರುಡೊ ಆಗ್ರಹಿಸಿದರು.

ಜಗತ್ತು ದೊಡ್ಡ ಬದಲಾವಣೆಯೆಡೆಗೆ ಹೋಗುತ್ತಿದೆ ಎಂದು ಅವರು ಹೇಳಿದರು. ಕೆನಡಾದಲ್ಲಿ 72,520 ಮಂದಿಗೆ ಈವರೆಗೆ ವೈರಸ್ ತಗುಲಿದೆ. ಗುರುವಾರ 242 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ಕಳೆದ 24ಗಂಟೆಯೊಳಗೆ 35 ಮಂದಿ ಮೃತಪಟ್ಟಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 5337ಕ್ಕೆ ಏರಿಕೆಯಾಗಿದೆ.