ಸನ್ಮಾರ್ಗ ವಾರ್ತೆ
ಗುರುಗಾಂವ್,ಮೇ.28: ಕೊರೋನ ವೈರಸ್ ರೋಗಲಕ್ಷಣಗಳಿಂದಾಗಿ ಬಿಜೆಪಿಯ ರಾಷ್ಟ್ರೀಯ ವಕ್ತಾರ ಸಂಬಿತ್ ಪಾತ್ರಾ ಅವರನ್ನು ಗುರಗಾಂವ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅವರನ್ನು ಗುರಗಾಂವ್‌ನ ಮೆಡಂತಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆಯ ಮೂಲಗಳು ಗುರುವಾರ ತಿಳಿಸಿವೆ.
ಬಿಜೆಪಿ ನಾಯಕ ಕೋವಿಡ್-19 ರೋಗಲಕ್ಷಣಗಳನ್ನು ಹೊಂದಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಸುದ್ದಿ ಚಾನೆಲ್‌ಗಳಲ್ಲಿ ಬಿಜೆಪಿ ಪ್ರಚಲಿತವಾಗಿದ್ದ ನಾಯಕರಲ್ಲಿ ಸಂಬಿತ್ ಪಾತ್ರ ಕೂಡ ಒಬ್ಬರು. ಸೋಷಿಯಲ್ ಮೀಡಿಯಾದಲ್ಲಿ ಬಹಳ ಸಕ್ರಿಯರಾಗಿದ್ದ ಅವರು ಗುರುವಾರ ಹಲವಾರು ಟ್ವೀಟ್‌ಗಳನ್ನು ಪೋಸ್ಟ್ ಮಾಡಿದ್ದರು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












