ಏಷ್ಯಾದಲ್ಲಿ ಅತಿ ಹೆಚ್ಚು ಸೋಂಕಿತರು ಭಾರತದಲ್ಲಿ; 24 ಗಂಟೆಗಳಲ್ಲಿ 7467 ಹೊಸ ಸೋಂಕು ಪ್ರಕರಣಗಳು

0
806

ಸನ್ಮಾರ್ಗ ವಾರ್ತೆ

ನವ ದೆಹಲಿ,ಮೇ.29: ದೇಶದಲ್ಲಿ 24 ಗಂಟೆಗಳ ಅವಧಿಯಲ್ಲಿ ಹೊಸ ಕೊರೋನ ವೈರಸ್ ರೋಗ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, 24 ಗಂಟೆಗಳಲ್ಲಿ (ಗುರುವಾರ ಮತ್ತು ಶುಕ್ರವಾರದ ನಡುವೆ) 7,467 ಹೊಸ ಪ್ರಕರಣಗಳನ್ನು ವರದಿಯಾಗಿವೆ. ಇದರೊಂದಿಗೆ ಒಟ್ಟು ಪ್ರಕರಣಗಳ ಸಂಖ್ಯೆಯು 1,65,799 ಕ್ಕೆ ತಲುಪಿದೆ.

ಇದರೊಂದಿಗೆ ಭಾರತವು ವಿಶ್ವದ 9 ನೇ ಸ್ಥಾನವನ್ನು ತಲುಪಿದೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿದ ಅಮೆರಿಕ ಮೊದಲ ಸ್ಥಾನದಲ್ಲಿದೆ. ಏಷ್ಯಾದಲ್ಲಿ ಹೆಚ್ಚು ಸೋಂಕಿತರು ಭಾರತದಲ್ಲಿದ್ದಾರೆ.

ಈ ನಡುವೆ, ಲಾಕ್ ಡೌನ್ ವಿಸ್ತರಿಸುವ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಎಲ್ಲಾ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದರು. ಮೇ 31 ರಂದು ನಿಷೇಧದ ನಾಲ್ಕನೇ ಹಂತ ಮುಗಿಯುವ ಮೊದಲು ಅವರು ರಾಜ್ಯಗಳಿಂದ ಸಲಹೆಗಳನ್ನು ಕೋರಿದ್ದಾರೆ.

ಗುರುವಾರ, ಮಹಾರಾಷ್ಟ್ರದಲ್ಲಿ 2598, ದೆಹಲಿಯಲ್ಲಿ 1024, ತಮಿಳುನಾಡಿನಲ್ಲಿ 827, ಗುಜರಾತ್‌ನಲ್ಲಿ 367, ಪಶ್ಚಿಮ ಬಂಗಾಳದಲ್ಲಿ 344, ರಾಜಸ್ಥಾನದಲ್ಲಿ 251, ಮಧ್ಯಪ್ರದೇಶದಲ್ಲಿ 192, ಉತ್ತರಪ್ರದೇಶದಲ್ಲಿ 179, ಬಿಹಾರದಲ್ಲಿ 149, ಆಂಧ್ರಪ್ರದೇಶದಲ್ಲಿ 128, ಹರಿಯಾಣ 123, ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ‌.

ಈ ಅಂಕಿಅಂಶಗಳು Covid19.Org ಅನ್ನು ಆಧರಿಸಿವೆ. ಇದೇ ಸಮಯದಲ್ಲಿ, ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ಈವರೆಗೆ 1 ಲಕ್ಷ 65 ಸಾವಿರದ 799 ಜನರು ಸೋಂಕಿಗೆ ಒಳಗಾಗಿದ್ದಾರೆ. ಈ ಪೈಕಿ 89 ಸಾವಿರದ 987 ಮಂದಿ ಚಿಕಿತ್ಸೆಯಲ್ಲಿದ್ದಾರೆ. 71 ಸಾವಿರದ 105 ಜನರು ಗುಣಮುಖರಾಗಿದ್ದಾರೆ ಮತ್ತು 4706 ಮಂದಿ ಸಾವನ್ನಪ್ಪಿದ್ದಾರೆ.

ಓದುಗರೇ,ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.