ಸನ್ಮಾರ್ಗ ವಾರ್ತೆ
ಹೊಸದಿಲ್ಲಿ,ಮೇ.29: ವಿಶ್ವಾದ್ಯಂತ ಕೊರೋನಾ ರೋಗಕ್ಕೆ ತುತ್ತಾದ ಸೋಂಕಿತರ ಸಂಖ್ಯೆಯು 59,05,415ಕ್ಕೆ ಏರಿಕೆಯಾಗಿದೆ.ಇದರಲ್ಲಿ 3,6,024(3.6ಲಕ್ಷ) ಮಂದಿ ಮೃತಪಟ್ಟಿದ್ದಾರೆ. 2,59,691(2.5ಲಕ್ಷ) ಮಂದಿ ಗುಣಮುಖರಾಗಿದ್ದಾರೆ. ಕೊರೋನಾ ಪೀಡಿತರ ಸಂಖ್ಯೆಯಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಕೊರೋನಾ 17,68,461ಮಂದಿಗೆ ದೃಢಪಟ್ಟಿದ್ದು, 1,03,330 ಜನರು ಮೃತಪಟ್ಟಿದ್ದಾರೆ.
ಸೋಂಕು ಕಂಡು ಬಂದ ಆರಂಭದಲ್ಲಿ ಚೀನಾದಲ್ಲಿ 82,995 ಮಂದಿಗೆ ರೋಗ ಕಂಡು ಬಂದಿತ್ತು. ಅಮೆರಿಕ, ಬ್ರೆಝಿಲ್ ರಷ್ಯಾ, ಸ್ಪೈನ್, ಬ್ರಿಟನ್ ,ಇಟಲಿ,ಫ್ರಾನ್ಸ್, ಜರ್ಮನಿ, ಭಾರತ, ಟರ್ಕಿ, ಇರಾನ್ ,ಪೆರು, ಕೆನಡಾ, ಚಿಲಿ ಸಹಿತ 14 ದೇಶಗಳಲ್ಲಿ ಕೊರಖನಾ ಹೆಚ್ಚು ಹಾವಳಿ ಮಾಡಿದೆ. ಭಾರತದ ಹತ್ತು ರಾಜ್ಯಗಳಲ್ಲಿ ಕೊರೋನ ಪೀಡಿತರ ಸಂಖ್ಯೆ 1.5ಲಕ್ಷ ಮೀರಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












