ಕೊರೋನ ಚೀನಾದ ಕೆಟ್ಟ ಕೊಡುಗೆ- ಚೀನಾದ ಮೇಲೆ ಮತ್ತೆ ಟ್ರಂಪ್ ಗರಂ

0
461

ಸನ್ಮಾರ್ಗ ವಾರ್ತೆ

ವಾಷಿಂಗ್ಟನ್,ಮೇ.29: ಕೊರೋನ ವೈರಸ್ ಚೀನದ ಕೆಟ್ಟ ಕೊಡುಗೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಅಮೆರಿಕದಲ್ಲಿ ಕೊರೋನದಿಂದ ಲಕ್ಷಕ್ಕೂ ಹೆಚ್ಚು ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಟ್ರಂಪ್ ಟ್ವೀಟ್ ಮಾಡಿ ಮತ್ತೆ ಚೀನದ ಮೇಲೆ ಆರೋಪವನ್ನು ಹೊರಿಸಿದರು.

ಬಹಳ ವಿಷಾದಪೂರ್ಣ ದಿನಗಳನ್ನು ಅಮೆರಿಕ ಹಿಂದಿಕ್ಕಿದೆ. ದೇಶದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕೊರೋನಗೆ ಬಲಿಯಾದರು. ಕೊರೋನಾ ಬಾಧಿಸಿ ಮೃತಪಟ್ಟವರ ಕುಟುಂಬದವರ ಶೋಕದಲ್ಲಿ ತಾನೂ ಭಾಗಿ ಎಂದು ಟ್ರಂಪ್ ಹೇಳಿದರು.

ಟ್ರಂಪ್ ವಿರುದ್ಧ ಮಾಧ್ಯಮ ಮತ್ತು ಟ್ವಿಟರ್‍‌ನಲ್ಲಿ ಟೀಕೆಗಳು ಬಲಗೊಳ್ಳುತ್ತಿದೆ. ಇದರ ನಡುವೆ ಅವರು ಹೊಸ ಪ್ರತಿಕ್ರಿಯೆಯನ್ನು ನೀಡಿದ್ದು ಟೀಕೆಗಳು ಹೆಚ್ಚಿದರೆ ಟ್ವಿಟರನ್ನೇ ಮುಚ್ಚಿ ಬಿಡುವ ಬೆದರಿಕೆಯನ್ನು ಹಾಕಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.