ಸನ್ಮಾರ್ಗ ವಾರ್ತೆ
ಮಿನಿಯಾಪೊಲಿಸ್,ಜೂ.2: ಅಮೆರಿಕದಲ್ಲಿ ಬಿಳಿಯರಾದ ಪೊಲೀಸರು ಜನಾಂಗದ್ವೇಷದಿಂದ ಮೃತಪಟ್ಟ ಫ್ಲಾಯ್ಡ್‌ರ ಕೊರಳು ಅಮುಕಿ ಕೊಂದ ಪ್ರಕರಣದಲ್ಲಿ ಅಧಿಕೃತ ಪೋಸ್ಟ್ ಮಾರ್ಟಂ ವರದಿ ಬಂದಿದ್ದು ಕೊಲೆ ಎಂಬುವುದನ್ನು ದೃಢಪಡಿಸಿದೆ.
ಮಿನಿಯಾಪೊಲಿಸ್ ಪೊಲೋಸ್ ಅಧಿಕಾರಿಗಳು ಬಲಪ್ರಯೋಗಿಸಿ ಕುತ್ತಿಗೆಯ ಮೇಲೆ ಮೊಣಕಾಲುರಿದ್ದರಿಂದಾಗಿ ಹೃದಯಾಘಾತ ಸಂಭವಿಸಿ 46 ವರ್ಷದ ಪ್ಲಾಯ್ಡ್ ಮೃತಪಟ್ಟಿದ್ದಾರೆ ಎಂದು ಮರಣೋತ್ತರ ಪರೀಕ್ಷೆಯಲ್ಲಿಯೂ ದೃಢಪಟ್ಟಿದೆ.
ಹೆನ್ನಪಿನ್ ಕೌಂಟಿಮೆಡಿಕಲ್ ಪರೀಕ್ಷಕರು ಸಾವಿಗೆ ಕೊಲೆಯೇ ಕಾರಣವೆಂದು ತಿಳಿಸಿದ್ದಾರೆ. ಜಾರ್ಜ್‌ರ ಆರೋಗ್ಯ ಸ್ಥಿತಿ ಸರಿಯಿರಲಿಲ್ಲ. ಮಾದಕ ವಸ್ತು ಆಡಿಕ್ಟ್ ಎಂದೆಲ್ಲ ಅವರ ಬಗ್ಗೆ ಹೇಳಲಾಗಿತ್ತು. ಪ್ಲಾಯ್ಡ್‌ರ ಕುಟುಂಬ ನಿಯೋಜಿಸಿದ್ದ ಖಾಸಗಿ ಮರಣೋತ್ತರ ಪರೀಕ್ಷೆಯ ಫಲಿತಾಂಶ ಹೊರ ಬಂದ ಬಳಿಕ ಅಧಿಕೃತ ಪೋಸ್ಟ್ ಮಾರ್ಟಂ ವರದಿ ಪ್ರಕಟವಾಗಿದೆ. ಪ್ಲಾಯ್ಡ್ ಉಸಿರಾಡಲು ಆಗದೆ ಮೃತಪಟ್ಟಿದ್ದರು. ಪೊಲೀಸರು ಅವರ ಕುತ್ತಿಗೆಯನ್ನು ಒತ್ತಿ ಹಿಡಿದ್ದರಿಂದ ಅವರಿಗೆ ಉಸಿರಾಡಲು ಆಗಿರಲಿಲ್ಲ.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












