ಮುಂಬೈ ಮಹಾನಗರಿಯಲ್ಲಿ ವೈದ್ಯರ ಅಭಾವ

0
506

ಸನ್ಮಾರ್ಗ ವಾರ್ತೆ

ಮುಂಬೈ,ಜೂ.2: ಅಗತ್ಯಕ್ಕೆ ತಕ್ಕಷ್ಟು ವೈದ್ಯರ ಅಲಭ್ಯತೆಯು ಮುಂಬೈ ಮಹಾನಗರದ ಪ್ರಧಾನ ಸವಾಲು ಆಗಿದೆ. ಕೊರೋನಾ ಪ್ರತಿರೋಧಕ್ಕೆ ಇದು ಅಡಚಣೆಯಾಗಿ ಪರಿಣಮಿಸಿದ್ದು ದಾದಿಯರ ಸಹಿತ ಅರೋಗ್ಯ ಕಾರ್ಯಕರ್ತರ ಅಭಾವವನ್ನು ನಗರ ಎದುರಿಸುತ್ತಿದೆ ಎಂದು ತಜ್ಞರು ಹೇಳಿದರು.

ಜನಸಂಖ್ಯೆ ಮತ್ತು ಕೊಳೆಗೇರಿ ಮುಂಬೈಯಲ್ಲಿ ಹೆಚ್ಚಿದೆ. ಅಲ್ಲಿನ ಪರಿಸ್ಥಿತಿಯು ವೈರಸ್ ಹರಡಲು ಕಾರಣವಾಗಿದೆ. ಇದನ್ನು ಪರಿಹರಿಸುವ ನಿಟ್ಟಿನಲ್ಲಿ ಕೇರಳದಿಂದ ವೈದ್ಯರು ಅಂಧೇರಿಗೆ ಬಂದಿದ್ದಾರೆ. ತಂಡದಲ್ಲಿ ಹದಿನಾರು ವೈದ್ಯರಿದ್ದಾರೆ. ಉಳಿದವರು ಒಂದು ವಾರದೊಳಗೆ ಇವರನ್ನು ಸೇರಿಕೊಳ್ಳಲಿದ್ದಾರೆ. ಇವರೆಲ್ಲರೂ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವವರು ಆಗಿದ್ದಾರೆ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.