ಸನ್ಮಾರ್ಗ ವಾರ್ತೆ
ಪ್ರತಾಪಗಡ,ಜೂ.2: ರಾಜ್ಯ ರಾಜಧಾನಿ ಲಕ್ನೋದಿಂದ 166 ಕಿ.ಮೀ ದೂರದಲ್ಲಿರುವ ಉತ್ತರ ಪ್ರದೇಶದ ಪ್ರತಾಪಗಡ ಜಿಲ್ಲೆಯಲ್ಲಿ 22 ವರ್ಷದ ಯುವಕನನ್ನು ಮರಕ್ಕೆ ಕಟ್ಟಿ ಸೋಮವಾರ ರಾತ್ರಿ ನೆರೆಹೊರೆಯವರು ಜೀವಂತವಾಗಿ ಸುಟ್ಟುಹಾಕಿದ ಘಟನೆ ಸಂಭವಿಸಿದೆ.ಹಳ್ಳಿಯ ನೆರೆಹೊರೆಯವರು ತಮ್ಮ ಮನೆಯ ಮಹಿಳೆಯೊಂದಿಗೆ ಪುರುಷನಿಗಿದ್ದ ಸಂಬಂಧವೇ ಕೊಲೆಗೆ ಕಾರಣ ಎಂದು ಹೇಳಿರುವುದಾಗಿ ವರದಿಯಾಗಿದೆ.
ಆ ಪ್ರದೇಶದ ವರದಿಗಳು ಹೇಳುವ ಪ್ರಕಾರ, ಹಲವಾರು ಪುರುಷರು ರಾತ್ರಿಯಲ್ಲಿ ವ್ಯಕ್ತಿಯ ಮನೆಗೆ ನುಗ್ಗಿ, ಅವನನ್ನು ಹೊರಗೆ ಎಳೆದು ತಂದು ಮರಕ್ಕೆ ಕಟ್ಟಿ, ಅವನಿಗೆ ಬೆಂಕಿ ಹಚ್ಚಿದರು ಎಂದಾಗಿದೆ.
ಘಟನೆಯ ನಂತರ ಹಳ್ಳಿಗೆ ಬಂದ ಪೊಲೀಸ್ ತಂಡವು ಮನುಷ್ಯನ ಅರ್ಧ ಸುಟ್ಟ ಶವವನ್ನು ಪತ್ತೆ ಹಚ್ಚಿದ ವೇಳೆ ಗ್ರಾಮಸ್ಥರ ಗುಂಪೊಂದು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಎರಡು ವಾಹನಗಳು ಮತ್ತು ಮೋಟಾರ್ ಸೈಕಲ್ಗೆ ಬೆಂಕಿ ಹಚ್ಚಿದರು. ಈ ಘಟನೆಯ ಮೇಳೆ ಕೆಲವು ಪೊಲೀಸರು ಗಾಯಗೊಂಡರೆಂದು ವರದಿಯಾಗಿದೆ.
ಕೊಲೆಯಾದ ವ್ಯಕ್ತಿಯನ್ನು ಅಂಬಿಕಾ ಪ್ರಸಾದ್ ಪಟೇಲ್ ಎಂದು ಗುರುತಿಸಲಾಗಿದ್ದು ಈತ ಕಳೆದ ವರ್ಷದಿಂದ ಮಹಿಳೆಯನ್ನು ಪ್ರೀತಿಸುತ್ತಿದ್ದ ಎಂದು ವರದಿಯಾಗಿದೆ. ಆದರೆ, ಮಹಿಳೆಯ ಕುಟುಂಬ ಇದಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕೆಲವು ತಿಂಗಳ ಹಿಂದೆ ಆಕೆಯು ಉತ್ತರ ಪ್ರದೇಶ ಪೊಲೀಸ್ ಕಾನ್ಸ್ಟೆಬಲ್ ಆಗಿ ಆಯ್ಕೆ ಯಾಗಿದ್ದು ಆಕೆಯನ್ನು ಕಾನ್ಪುರದಲ್ಲಿ ನೇಮಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಆದರೆ, ಕೆಲವು ವಾರಗಳ ಹಿಂದೆ, ಅವರಿಬ್ಬರೂ ಜೊತೆಯಾಗಿದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತಯ ಎಂದು ತಿಳಿದು ಬಂದಿದೆ.
ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪ್ರಚಾರ ಮಾಡಿದ್ದಕ್ಕಾಗಿ ಮಹಿಳೆ ಮತ್ತು ಆಕೆಯ ಪೋಷಕರು ಅಂಬಿಕಾ ಪಟೇಲ್ನನ್ನು ದೂಷಿಸಿದ್ದರು. ತನ್ನ ಚಾರಿತ್ರ್ಯಕ್ಕೆ ಧಕ್ಕೆ ತರಲು ಪ್ರಯತ್ನಿಸಿದ ಆರೋಪದ ಮೇಲೆ ಮಹಿಳೆಯು ಪಟೇಲ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಇದೇ ನೆರೆಹೊರೆಯರ ಜನರು ಈಗ ಅವರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂದು ಆರೋಪಿಸಲಾಗಿದೆ “ಎಂದು ಪ್ರತಾಪಗಡದ ಪೊಲೀಸ್ ಮುಖ್ಯಸ್ಥ ಅಭಿಷೇಕ್ ಸಿಂಗ್ ಹೇಳಿದ್ದಾರೆ.
ಈ ಪ್ರಕರಣ ದಾಖಲಾದ ನಂತರ ಅಂಬಿಕಾ ಪ್ರಸಾದ್ ಪಟೇಲ್ ಜೈಲಿಗೆ ಹೋಗಿದ್ದರು, ಆದರೆ ಮೇ 1 ರಂದು ಪೆರೋಲ್ ಮೇಲೆ ಬಿಡುಗಡೆ ಮಾಡಲಾಯಿತು. ಮಾರ್ಚ್ನಲ್ಲಿ, ದೇಶದಲ್ಲಿ 71 ಜೈಲುಗಳಲ್ಲಿ ದಾಖಲಾದ 11,000 ಕೈದಿಗಳನ್ನು ಮುಕ್ತಗೊಳಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿತು.
ಅಂಬಿಕಾ ಪ್ರಸಾದ್ನನ್ನು ಸಜೀವ ದಹನಗೈದ ಅಪರಾಧ ಆರೋಪಿಗಳಲ್ಲಿ ಇದುವರೆಗೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದು, ಅವರಲ್ಲಿ ಒಬ್ಬರು ಹುಡುಗಿಯ ತಂದೆಯಾಗಿದ್ದಾರೆಂದು ತಿಳಿಸಿದ್ದಾರೆ. ಶ್ರೀ ಪಟೇಲ್ನ ಅರ್ಧ ಸುಟ್ಟ ಶವವನ್ನು ಮರಣೊತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಗ್ರಾಮದಲ್ಲಿ ಭಾರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












