ವರ್ಣಭೇದ ನೀತಿಯ ವಿರುದ್ಧ ಮಂಡಿಯೂರಿ ಕ್ಷಮಾಯಾಚನೆ ಕೇಳಿದ ಬಿಳಿಯರು- ವಿಡಿಯೋ

0
1075

ಸನ್ಮಾರ್ಗ ವಾರ್ತೆ

ಅಮೇರಿಕ,ಜೂ,2: “ವರ್ಷಗಳಿಂದ ಕರಿಯರ ವಿರುದ್ಧ ನಡೆದು ಬಂದ ವರ್ಣಭೇದ ನೀತಿಯ ವಿರುದ್ದ ತಮ್ಮ ನೆರಹೊರೆಯ ಕಪ್ಪು ಜನಾಂಗೀಯ ಜನರೊಂದಿಗೆ ಬಿಳಿಯ ನೆರೆಹೊರೆಯವರು ಮಂಡಿಯೂರಿ ಕ್ಷಮೆಯಾಚಿಸುತ್ತಿರುವ ಸುಂದರ ಕ್ಷಣ…” ಎಂಬ ಟ್ವೀಟ್ ವಿಡಿಯೋ ಇದೀಗ ವೈರಲ್ ಆಗಿದೆ. ವಿಡಿಯೋದಲ್ಲಿ ಬಿಳಿಯ ನೆರೆಹೊರೆಯವರು ತಮ್ಮ ಕರಿಯ ನೆರೆಹೊರೆಯವರರೊಂದಿಗೆ ಮಂಡಿಯೂರಿ ಕ್ಷಮಾಯಾಚನೆ ನಡೆಸುತ್ತಿರುವುದನ್ನು ಕಾಣಬಹುದು.

ಅಮೇರಿಕದಲ್ಲಿ ಪೊಲೀಸರಿಂದ ಹಾಡುಹಗಲೇ ಹತ್ಯೆಗೊಳಗದಾದ ಆಫ್ರೋ- ಅಮೇರಿಕನ್ ಜಾರ್ಜ್ ಫ್ಲಾಯ್ಡ್ ನಿಧನದ ಬಳಿಕ ಭುಗಿಲೆದ್ದ ವರ್ಣಭೇದ ವಿರೋಧಿ ಪ್ರತಿಭಟನೆಯು ಅಮೇರಿಕಾದಾದ್ಯಂತ ಆವರಿಸಿದೆ. ಈ ನಡುವೆ ಪ್ರತಿಭಟನಾಕಾರರು ಪ್ರತಿಭಟನೆಯನ್ನು ತೀವ್ರಸ್ವರೂಪಕ್ಕೆ ತಿರುಗಿಸಿದ್ದು, ಅಮೇರಿಕನ್ ಅಧ್ಯಕ್ಷ ಡೊನಾಲ್ಟ್ ಟ್ರಂಪ್ ರವರನ್ನೂ ಕೂಡ ಶ್ವೇತ ಭವನದ ಭೂಗತ ಕೋಣೆಗೆ ಸ್ಥಳಾಂತರಿಸಲಾಗಿತ್ತು ಎಂದು ವರದಿಯಾಗಿತ್ತು.

ಅಮೇರಿಕಾದ 40 ನಗರಗಳಲ್ಲಿ ಪ್ರತಿಭಟನೆ ತೀವ್ರತೆಯನ್ನು ಪಡೆದಿದೆ. ಪೊಲೀಸರು ಕೂಡ ಪ್ರತಿಭಟನಾಕಾರರಿಗೆ ಮಣಿದು ಮಂಡಿಯೂರಿ ಕ್ಷಮಾಯಾಚನೆ ನಡೆಸಿರುವುದು ವರದಿಯಾಗಿತ್ತು.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.