ಸನ್ಮಾರ್ಗ ವಾರ್ತೆ
ವಾಷಿಂಗ್ಟನ್,ಜೂ.3: ಮಿನಿಯಪೊಲಿಸ್ ಎಂಬಲ್ಲಿ ಪೊಲೀಸರಿಂದ ಕತ್ತು ಅಮುಕಲ್ಪಟ್ಟು ಹತ್ಯೆಗೀಡಾದ ಕಪ್ಪು ವರ್ಗದ ಜಾರ್ಜ್ ಫ್ಲಾಯ್ಡ್ ಸಾವಿಗೆ ನ್ಯಾಯ ಒದಗಿಸಬೇಕೆಂದು ಪತ್ನಿ ರೊಕ್ಸಿ ವಾಷಿಂಗ್ಟನ್ ಆಗ್ರಹಿಸಿದ್ದಾರೆ.ಫ್ಲಾಯ್ಡ್ ಉತ್ತಮ ವ್ಯಕ್ತಿ, ಉತ್ತಮ ತಂದೆಯಾಗಿದ್ದರು ಎಂದು ರೊಕ್ಸಿ ಈ ಸಂದರ್ಭದಲ್ಲಿ ಹೇಳಿದರು. ಅವರು ನಮ್ಮನ್ನು ಸಾಕಿದರು. ನಮಗೆ ಎಲ್ಲವನ್ನೂ ಕೊಟ್ಟರು. ನಮಗಾಗಿ ಜೀವಿಸಿದರು.ನಮಗಾಗಿಯೇ ಕೆಲಸ ಮಾಡಿದರು ಎಂದು ರೋಕ್ಸಿ ಜಾರ್ಜ್ ಫ್ಲಾಯ್ಡ್ರನ್ನು ಸ್ಮರಿಸಿದರು.
ಮಗಳ ಬೆಳವಣಿಗೆ ನೋಡದೆ ಫ್ಲಾಯ್ಡ್ ವಿದಾಯ ಹೇಳಿದ್ದಾರೆ. ಅವಳಿಗೆ ಯಾವುದೇ ಸಮಸ್ಯೆ ಇದ್ದರೂ ತನ್ನ ತಂದೆಯ ಬೆಂಬಲವಿರುತ್ತಿತ್ತು ಆದರೆ ಅದು ಈಗ ಇಲ್ಲವಾಗಿದೆ ಎಂದು ರೋಕ್ಸಿ ಹೇಳಿದರು. ಮಿನಿಯಪೊಲಿಸ್ ಸಿಟಿ ಹಾಲ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರೋಕ್ಸಿ ಕಣ್ನೀರುಗೆರೆಯುತ್ತಾ ಪತಿಯನ್ನು ನೆನೆದರು.
ಮಿನಿಯಪೊಲೀಸ್ ನಗರದ ಪೊಲೀಸ್ ಅಧಿಕಾರಿಗಳು ಬಲಪ್ರಯೋಗಿಸಿ ಕೊರಳು ಹಿಸುಕಿದ್ದರಿಂದ ಕಪ್ಪುವರ್ಗದ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿದ್ದರು. ತದನಂತರ ಅಮೆರಿಕಾದ್ಯಂತ ಈಗ ತೀವ್ರ ಪ್ರತಿಭಟನೆ ನಡೆಯುತ್ತಿದ್ದು 4೦ ಕ್ಕೂ ಹೆಚ್ಚು ನಗರಗಳಲ್ಲಿ ಕರ್ಫ್ಯೂ ಜಾರಿಯಲ್ಲಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












