ಸ್ವೀಡಿಷ್ ಪ್ರಧಾನಿ ಕೊಲೆ ಪ್ರಕರಣ: 20 ವರ್ಷ ಹಿಂದೆಯೇ ಆರೋಪಿ ಸಾವು; 34 ವರ್ಷಗಳ ತನಿಖೆ ಅಂತ್ಯ

0
743

ಸನ್ಮಾರ್ಗ ವಾರ್ತೆ

ಸ್ಟಾಕ್‍ಹೋಂ,ಜೂ.11: ಸ್ವೀಡಿಷ್ ಪ್ರಧಾನಿ ಒಲಾಫ್ ಫಾಮೆಯವರು 1986ರಲ್ಲಿ ಕೊಲ್ಲಲ್ಪಟ್ಟಿದ್ದರು ಈ ಪ್ರಕರಣದಲ್ಲಿ ಹುಡುಕುತ್ತಿದ್ದ ಆರೋಪಿಯು 20 ವರ್ಷ ಹಿಂದೆಯೇ ಆತ್ಮಹತ್ಯೆಮಾಡಿಕೊಂಡಿರುವುದು ಈಗ ಪತ್ತೆಯಾಗಿದೆ. ಆರೋಪಿ ಸ್ಟಿಗ್ ಎಸ್ಗಾಂ ಕೊಲೆ ಪಾತಕಿಯಾಗಿದ್ದು, ಇದರೊಂದಿಗೆ ತನಿಖೆ ಅಂತ್ಯವಾಗಿದೆ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ. ಸ್ಕಾಂಡಿಯ ಮ್ಯಾನ್ ಎಂದು ತಿಳಿಯಲಾಗಿದ್ದ ಕೊಲೆಗೆಡುಕ ಶೂಟಿಂಗ್ ಕ್ಲಬ್‍ನ ಸದಸ್ಯನಾಗಿದ್ದ ಎಂದು ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ಇದೇ ವೇಳೆ, ಕೊಲೆಗೆ ಉಪಯೋಗಿಸಿದ ಆಯುಧ, ಫಾರೆನ್ಸಿಕ್ ಸಾಕ್ಷ್ಯಗಳು ಪತ್ತೆಯಾಗಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದರು. ಒಲಾಫ್ ಫಾಮೆ ಸ್ವೀಡನ್‍ನ ಜನಪ್ರಿಯ ನಾಯಕನಾಗಿದ್ದರು. ಫಾಮೆ ಪತ್ನಿಯ ಜೊತೆ ಸಿನೆಮಾ ಗೃಹದಿಂದ ಹೊರಬಂದಾಗ ಗುಂಡಿಟ್ಟು ಕೊಲ್ಲಲಾಗಿತ್ತು. ಮೂವತ್ತು ವರ್ಷಕ್ಕೂ ಹೆಚ್ಚು ಸಮಯದಿಂದ ತನಿಖೆ ನಡೆಸಲಾಗುತ್ತಿದ್ದ ಪ್ರಕರಣ ಇದು. ಆದರೆ ಕೊಲೆಗಡುಕನನ್ನಾಗಲಿ ಕೊಲೆಗೆ ಬಳಸಿದ ಬಂದೂಕನ್ನಾಗಲಿ ಪತ್ತೆಹಚ್ಚಲು ಸಾಧ್ಯವಾಗಿರಲಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಬಂಧಿಸಲಾಗಿತ್ತು. ಆದರೆ ಆತನಿಂದ ಬಂದೂಕು ಸಿಗದ ಕಾರಣಕ್ಕಾಗಿ ಅವನನ್ನಹ ಬಿಡುಗಡೆಗೊಳಿಸಲಾಗಿತ್ತು.

ಸೋಶಿಯಲ್ ಡೆಮಕ್ರಾಟಿಕ್ ಪಾರ್ಟಿಯ ನಾಯಕರಾಗಿದ್ದ ಪಾಮೆ ಅಣುಯುದ್ಧ, ಸೋವಿಯತ್ ಯೂನಿಯನ್‍ನ ಜೆಕೊಸ್ಲಾವೇಕಿಯಾ ಅತಿಕ್ರಮಣ, ಅಮೆರಿಕದ ವಿಯೆಟ್ನಾಂ ವಿರುದ್ಧ ಬಲವಾದ ನಿಲುವನ್ನು ಹೊಂದಿದ್ದರು. ಫಾಮೆಯನ್ನು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 130 ಮಂದಿ ತಪ್ಪೊಪ್ಪಿಕೊಂಡಿದ್ದರೂ ಯಾರ ವಿರುದ್ಧವೂ ಸಾಕ್ಷ್ಯಗಳನ್ನು ಕಂಡು ಹುಡುಕಲು ಸಾಧ್ಯವಾಗಿರಲಿಲ್ಲ.

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.