ಸನ್ಮಾರ್ಗ ವಾರ್ತೆ
2016 ರ ಉನ್ನಾವೋದಲ್ಲಿ ದಲಿತ ಕುಟುಂಬವನ್ನು ಹಗ್ಗದಿಂದ ಕಟ್ಟಿ ಥಳಿಸಿದ ಘಟನೆಯನ್ನು ಮರು ನೆನಪಿಸುವಂತಹುದ್ದೇ ಘಟನೆಯೊಂದಿ ಲಕ್ನೋದ ಬಾರೌಲಿಯ ಖಲೀಲಾಬಾದ್ ಗ್ರಾಮದಲ್ಲಿ ನಡೆದಿದ್ದು, ಮೂರು ದಲಿತ ಪುರುಷರನ್ನು ಹಗ್ಗಗಳಿಂದ ಕಟ್ಟಿಹಾಕಿ, ಕೊರಳಿಗೆ ಬೂಟಿನ ಮಾಲೆಯನ್ನು ತೊಡಿಸಿ ಥಳಿಸುತ್ತಾ ಮೆರವಣಿಗೆ ಮಾಡಿದ ಅಮಾನವೀಯ ಘಟನೆ ನಡೆದಿದೆ.
A grim reminder to the Una flogging incident. Dalit men were tied up, beaten, forcefully tonsured and paraded around with shoes hung around their neck in Lucknow's Khalilabad village allegedly for "stealing a fan." @TheQuint pic.twitter.com/Nrzw5YW2HT
— Asmita Nandy (@NandyAsmita) June 11, 2020
ಜೂನ್ 4 ರಂದು ಈ ಘಟನೆ ನಡೆದಿದ್ದು, ಓಬಿಸಿಗೆ ಸೇರಿದ ಓರ್ವ ಮತ್ತು ಪರಿಶಿಷ್ಟ ಜಾತಿಗಳಿಗೆ ಸೇರಿದ ಇಬ್ಬರು ಪುರುಷರು ‘ಬ್ರಾಹ್ಮಣ ವ್ಯಕ್ತಿಯ’ ಮನೆಯಿಂದ ಫ್ಯಾನ್ ಕದಿಯುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆಗೈಯ್ಯಲಾಗಿದೆ ಎಂದು ಸ್ಥಳೀಯ ಪೊಲೀಸರು ದಿ ಕ್ವಿಂಟ್‌ಗೆ ತಿಳಿಸಿದ್ದಾರೆ.
“ಕುಟುಂಬವು ಮೂವರನ್ನು ಹಿಡಿದ ನಂತರ, ಇತರ ಗ್ರಾಮಸ್ಥರು ಕೂಡ ಒಟ್ಟುಗೂಡಿದರು ಮತ್ತು ಶೀಘ್ರದಲ್ಲೇ ಜನಸಮೂಹ ಅವರನ್ನು ಹೊಡೆಯಲು ಪ್ರಾರಂಭಿಸಿತು. ಅವರನ್ನು ಮತ್ತಷ್ಟು ಅವಮಾನಿಸಲು, ಅವರು ಹಠಾತ್ತನೆ ತಲೆ ಬೋಳಿಸಿದರು ಮತ್ತು ಕೊರಳಿಗೆ ಬೂಟುಗಳನ್ನು ನೇತುಹಾಕಿ ಹಳ್ಳಿಯ ಸುತ್ತಲೂ ಮೆರವಣಿಗೆ ಮಾಡಿದರು” ಎಂದು ಪಿಜಿಐ ಪೊಲೀಸ್ ಠಾಣೆಯ ಉಸ್ತುವಾರಿ ಕೆ.ಕೆ. ಮಿಶ್ರಾ ಹೇಳಿದರು.
ಎರಡೂ ಕಡೆಯಿಂದ ಪ್ರಕರಣಗಳು ದಾಖಲಾಗಿದೆ
. “ಮೂವರನ್ನು ಕಳ್ಳತನದ ಆರೋಪದ ಮೇಲೆ ಬಂಧಿಸಲಾಗಿದೆ ಮತ್ತು ಸಾರ್ವಜನಿಕವಾಗಿ ಅವಮಾನಿಸಿದ ಇಬ್ಬರು ಆರೋಪಿಗಳನ್ನು ಸಹ ಐಪಿಸಿ ಮತ್ತು ಎಸ್ಸಿ / ಎಸ್ಟಿ ಕಾಯ್ದೆಯ ವಿವಿಧ ವಿಭಾಗಗಳ ಅಡಿಯಲ್ಲಿ ಬಂಧಿಸಲಾಗಿದೆ. ಇತರರನ್ನು ಗುರುತಿಸಲು ನಾವು ವೀಡಿಯೋಗಳು ಮತ್ತು ಫೋಟೋಗಳನ್ನು ನೋಡುತ್ತಿದ್ದೇವೆ. ” ಎಂದು ಅವರು ಹೇಳಿದರು.
ಭೀಮ್ ಸೇನೆಯ ಮುಖ್ಯಸ್ಥ ಚಂದ್ರ ಶೇಖರ್ ಆಜಾದ್ ಈ ಘಟನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ ಮತ್ತು “ಇದು ಉನ್ನಾವೋದ ಹೊಡೆತಗಳ ಘಟನೆಯ ಜ್ಞಾಪನೆಯಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ. 2016 ರಲ್ಲಿ, ಗುಜರಾತ್‌ನ ಉನ್ನಾದಲ್ಲಿ ಹಸುವಿನ ರಕ್ಷಣೆಯ ನೆಪದಲ್ಲಿ ದಲಿತ ಕುಟುಂಬದ ಏಳು ಸದಸ್ಯರನ್ನು ಜನರ ಗುಂಪೊಂದು ಸಾರ್ವಜನಿಕವಾಗಿ ಥಳಿಸಿ ಹಲ್ಲೆ ನಡೆಸಿದ್ದರು. ಘಟನೆಯ ವಿಡಿಯೋ ವೈರಲ್ ಆಗಿತ್ತು, ತದನಂತರ ಇದು ಜಾತಿ ತಾರತಮ್ಯದ ವಿರುದ್ಧ ದೇಶಾದ್ಯಂತ ಭಾರಿ ಪ್ರತಿಭಟನೆಗೆ ಕಾರಣವಾಗಿತ್ತು.
योगी का रामराज्य दलितों के लिए कब्रगाह है। यूपी के लखनऊ, पीजीआई थाना क्षेत्र में ब्राह्मणवादियों ने ऊना कांड को दोहराया है।
21वीं सदी में भी मनुस्मृति का दंभ पाले ये लोग सत्ता के नशे में मदमस्त हैं। घटना स्थल पर भीम आर्मी की टीम पहुंची है। याद रहे.. एक दिन यह सरकार भी बदलेगी। pic.twitter.com/eRd4XYF6GC
— Chandra Shekhar Aazad (@BhimArmyChief) June 9, 2020
ಉತ್ತರಪ್ರದೇಶದಲ್ಲಿ ಒಂದು ವಾರದ ಅವಧಿಯಲ್ಲಿ ದಲಿತರ ವಿರುದ್ಧ ದೌರ್ಜನ್ಯ ನಡೆದ ಎರಡನೆಯ ಘಟನೆ ಇದು. ಜೂನ್ 6 ರಂದು, ಯುಪಿ ಯ ಅಮ್ರೋಹಾ ಜಿಲ್ಲೆಯಲ್ಲಿ 17 ವರ್ಷದ ದಲಿತ ಹುಡುಗನನ್ನು ತನ್ನ ಹಳ್ಳಿಯ ದೇವಸ್ಥಾನವೊಂದಕ್ಕೆ ಪ್ರವೇಶಿಸುವ ಬಗ್ಗೆ ವಿವಾದ ಉಂಟಾದ ನಂತರ ಗುಂಡಿಕ್ಕಿ ಕೊಲ್ಲಲಾಗಿತ್ತು.
ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












