ಕಮಲಾಪುರ: ಕೊರೋನ ಸೋಂಕಿತರಿದ್ದ ಆಂಬುಲೆನ್ಸ್‌ಗೆ ಗ್ರಾಮಸ್ಥರಿಂದ ಕಲ್ಲೆಸೆತ

0
525
ಸಾಂದರ್ಭಿಕ ಚಿತ್ರ

ಸನ್ಮಾರ್ಗ ವಾರ್ತೆ

ಬೆಂಗಳೂರು,ಜೂ.16: ಕೊರೋನ ರೋಗಿಗಳನ್ನು ಕೊಂಡು ಹೋಗುತ್ತಿದ್ದ ಅಂಬುಲೆನ್ಸ್‌ಗೆ ಮತ್ತು ಹಿಂಬಾಲಿಸುತ್ತಿದ್ದ ಆರೋಗ್ಯ ಇಲಾಖೆಯ ವಾಹನಕ್ಕೆ ಕರ್ನಾಟಕದ ಕಮಲಾಪುರ ತಾಲೂಕಿನ ಮರಮಂಜಿ ತಾಂಡ ಎಂಬಲ್ಲಿ ದುಷ್ಕರ್ಮಿಗಳು ಕಲ್ಲೆಸೆದಿದ್ದಾರೆ.

ಸೋಮವಾರ ಸಂಜೆಯು ಗ್ರಾಮದ ಹದಿನೈದು ಮಂದಿಗೆ ಕೊರೋನ ದೃಢಪಟ್ಟಿತ್ತು. ಪರೀಕ್ಷೆ ಫಲಿತಾಂಶ ಬಂದೊಡನೆ ಮನೆಯಲ್ಲಿ ಕ್ವಾರಂಟೈನ್‌ನಲ್ಲಿದ್ದವರನ್ನು ಆಸ್ಪತ್ರೆಗೆ ದಾಖಲಿಸುವುದಕ್ಕಾಗಿ ಆಂಬುಲೆನ್ಸ್‌ನೊಂದಿಗೆ ಆರೋಗ್ಯ ಕಾರ್ಯಕರ್ತರು ಗ್ರಾಮಕ್ಕೆ ಬಂದಿದ್ದರು. ರೋಗಿಗಳನ್ನು ಆಂಬುಲೆನ್ಸ್‌ಗೆ ಹತ್ತಿಸಲಾಗಿತ್ತು.

ಇದೇ ವೇಳೆ ಆರೋಗ್ಯ ಕಾರ್ಯಕರ್ತರಲ್ಲಿ ಒಬ್ಬನಿಗೆ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ನಂತರ ರೋಗಿಗಳನ್ನು ಕರೆದುಕೊಂಡು ಹೋಗುವ ಆಂಬುಲೆನ್ಸ್ ಮತ್ತು ಆರೋಗ್ಯ ಕಾರ್ಯಕರ್ತರ ವಾಹನಕ್ಕೆ ಗ್ರಾಮಸ್ಥರು ಕಲ್ಲೆಸದರು. ಘಟನೆಯಲ್ಲಿ ಕಮಲಾಪುರ ಪೊಲೀಸರು ಗ್ರಾಮಸ್ಥರ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

 

ಓದುಗರೇ, ಸನ್ಮಾರ್ಗ ಫೇಸ್‌ಬುಕ್ ಪೇಜ್‌ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.