ಬಡಕುಟುಂಬಕ್ಕೆ ಮನೆ ಹಸ್ತಾಂತರಿಸಿದ ಜಮಾಅತೆ ಇಸ್ಲಾಮೀ ಹಿಂದ್: ಕನಸಲ್ಲೂ ಊಹಿಸಿರಲಿಲ್ಲ- ಕಣ್ಣು ತುಂಬಿಕೊಂಡ ಕುಟುಂಬ

0
1561

ಸನ್ಮಾರ್ಗ ವಾರ್ತೆ

ಮಂಗಳೂರು, ಜುಲೈ 3: “ಕನಸ್ಸಲ್ಲೂ ಊಹಿಸಲು ಸಾಧ್ಯವಿಲ್ಲದ್ದಿದು. ಮನೆ ಬಿಡಿ, ಸ್ವಂತದ್ದೆಂದು ಕನಿಷ್ಠ ಒಂದು ಕೋಣೆಯನ್ನೂ ನಾನು ಊಹಿಸಿರಲಿಲ್ಲ. ಅಲ್‌ ಹಮ್ದುಲಿಲ್ಲಾಹ್‌, ಅಲ್ಲಾಹನು ನಮ್ಮನ್ನು ಈ ಅವಸ್ಥೆಗೆ ತಲುಪಿಸಿದ… ”

ವಿಧವೆಯ ಮನಸ್ಸು ತುಂಬಿದ ಮಾತಿದು.

ಹೌದು, ಕಳೆದ ಹಲವು ವರ್ಷಗಳಿಂದ ತನ್ನ ನಾಲ್ಕು ಅನಾಥ ಹೆಣ್ಣುಮಕ್ಕಳೊಂದಿಗೆ, ಬಹಳ ಸಂಕಷ್ಟದ ಬದುಕು ಸವೆಸುತ್ತಿದ್ದ ವಿಧವೆಯೋರ್ವರಿಗೆ, ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌ ಮಂಗಳೂರು ಶಾಖೆಯ ವತಿಯಿಂದ, ಬಂಟ್ವಾಳ ತಾಲೂಕಿನ ಕುಕ್ಕಾಜೆ ಎಂಬಲ್ಲಿ, ಎಲ್ಲ ಮೂಲಭೂತ ಸವಲತ್ತುಗಳನ್ನೊಳಗೊಂಡ ಚೆಂದದ ಮನೆಯೊಂದನ್ನು ಹಸ್ತಾಂತರಿಸಲಾಯಿತು. ಸೋಷಿಯಲ್ ಮೀಡಿಯಾದ ಚಿರಪರಿಚಿತ ಸಮಾಜ ಸೇವಕ ಆಶಿಕ್‌ ಕುಕ್ಕಾಜೆ ಸರಳವಾಗಿ ಉದ್ಘಾಟಿಸಿ, ಸಂಸ್ಥೆಯ ಕಾರ್ಯ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಮಾಅತೆ ಇಸ್ಲಾಮೀ ಹಿಂದ್, ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಜನಾಬ್‌ ಮುಖ್ತಾರ್‌ ಅಹ್ಮದ್‌ ಸಂದರ್ಭೋಚಿತ ಉಪದೇಶ ನೀಡಿದರು. ಸಮಾಜ ಸೇವಾ ಘಟಕ, ಪಾಣೆಮಂಗಳೂರು ಶಾಖೆಯ ಅಧ್ಯಕ್ಷರಾದ ಮುಸ್ತಫಾ ಎಂ‌. ಹೆಚ್‌., ಸದಸ್ಯರಾದ ಆದಮ್‌ ಸಾಹೇಬ್, ಶಂಶೀರ್ ಮೆಲ್ಕಾರ್‌ ಉಪಸ್ಥಿತರಿದ್ದರು. ಸಮಾಜ ಸೇವಾ ಘಟಕ, ಜಮಾಅತೆ ಇಸ್ಲಾಮೀ ಹಿಂದ್‌, ಮಂಗಳೂರು ಸದಸ್ಯರಾದ ಅಬ್ದುಲ್ ಕರೀಮ್‌, ಬೆಂಗರೆ ಒಟ್ಟು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವನ್ನರ್ಪಿಸಿದರು.

ಸರ್ವ ರೀತಿಯಲ್ಲೂ ಸಹಕರಿಸಿದ ಎಲ್ಲರನ್ನೂ ಅಲ್ಲಾಹನು ಸ್ವೀಕರಿಸಿ ತಕ್ಕ ಪ್ರತಿಫಲ ನೀಡಿ ಅನುಗ್ರಹಿಸಲಿ. ವಿಶೇಷವಾಗಿ ಆರ್ಥಿಕ ಸಹಾಯವನ್ನು ಒದಗಿಸಿದ ದಾನಿಗಳ ವ್ಯಾಪಾರ-ವ್ಯವಹಾರಗಳಲ್ಲಿ ಅಲ್ಲಾಹನು ಸದಾ ಸಮೃದ್ಧಿಯನ್ನು ದಯಪಾಲಿಸಲಿ ಎಂದು ಸಭೆಯಲ್ಲಿ ಪ್ರಾರ್ಥಿಸಲಾಯಿತು.

ವರದಿ- ಸಿದ್ದೀಕ್ ಜಕ್ರಿಬೆಟ್ಟು

ಓದುಗರೇ, sanmarga ಫೇಸ್ ಬುಕ್ ಪೇಜ್ ಅನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.