ಸನ್ಮಾರ್ಗ ವಾರ್ತೆ
ಜಿದ್ದ,ಜು.21: ಸೌದಿ ಅರೇಬಿಯ ಬಕ್ರೀದ್ನ್ನು ಜುಲೈ 31ರ ಶುಕ್ರವಾರದಂದು ಆಚರಿಸಲು ತೀರ್ಮಾನಿಸಿದೆ. ಸೌದಿ ಸುಪ್ರೀಂ ಕೋರ್ಟು ಜುಲೈ 31ಕ್ಕೆ ಬಕ್ರೀದ್ ಎಂದು ತಿಳಿಸಿದ್ದು, ದುಲ್ ಕಅ್ದ 29ಕ್ಕೆ (ಸೋಮವಾರ) ದುಲ್ಹಜ್ಜ್ ಚಂದ್ರದರ್ಶನ ನೋಡಲು ಸುಪ್ರೀಂಕೋರ್ಟು ಆದೇಶಿಸಿತ್ತಾದರೂ ಅಂದು ಎಲ್ಲಿಯೂ ಚಂದ್ರ ದರ್ಶನವಾಗಿಲ್ಲ.
ಮಂಗಳವಾರ ದುಲ್ ಕಅದ್ 30 ಪೂರ್ತಿಯಾಗುತ್ತದೆ. ಹಜ್ಜ್ನ ಪ್ರಧಾನ ಕರ್ಮಗಳು ಅರಫಾ ದಿನ ಜುಲೈ 30ಕ್ಕೆ ಗುರುವಾರ ಆಗಿರಲಿದೆ ಎಂದು ಸೌದಿ ಅರೇಬಿಯಾದ ಸುಪ್ರೀಂ ಕೋರ್ಟು ತಿಳಿಸಿದೆ.
ಓದುಗರೇ, ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












