‘ಅರ್ನಾಬ್-ದಿ ನ್ಯೂಸ್ ಪ್ರಾಸ್ಟಿಟ್ಯೂಟ್’
ಸನ್ಮಾರ್ಗ ವಾರ್ತೆ
ನವದೆಹಲಿ,ಆ.4: ರಿಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾಮಿ ಅವರ ನಿಜ ಬಣ್ಣ ಬಯಲು ಮಾಡಲು ಸಿನೆಮಾ ನಿರ್ಮಿಸುವುದಾಗಿ ನಿರ್ಮಾಪಕ ರಾಮ್ ಗೋಪಾಲ್ ವರ್ಮಾರವರು ಸೋಮವಾರ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಲ್ಲಿ ಘೋಷಿಸಿದ್ದಾರೆ.
‘ಅರ್ನಾಬ್-ದಿ ನ್ಯೂಸ್ ಪ್ರಾಸ್ಟಿಟ್ಯೂಟ್’ ಎಂಬ ಶೀರ್ಷಿಕೆಯಲ್ಲಿ ಅರ್ನಬ್ ಗೋಸ್ವಾಮಿ ಕುರಿತು ಚಲನಚಿತ್ರವನ್ನು ಮಾಡುವುದಾಗಿ ರಾಮ್ ಗೋಪಾಲಗ ಘೋಷಿಸಿದ್ದು, ಸರಣಿ ಟ್ವೀಟ್ಗಳಲ್ಲಿ, ಚಲನಚಿತ್ರ ನಿರ್ಮಾಪಕ ಅರ್ನಬ್ ಮೇಲೆ ಏಕೆ ಚಲನಚಿತ್ರ ಮಾಡುತ್ತಿದ್ದಾರೆ ಎಂಬುದನ್ನು ವಿವರಿಸಿದ್ದಾರಲ್ಲದೇ ಬಾಲಿವುಡ್ನಲ್ಲಿ ಟಿವಿ ಚರ್ಚೆಗಳಿಗೆ ಪತ್ರಕರ್ತರನ್ನು ಆಹ್ವಾನಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾದ ಸುಶಾಂತ್ ಸಿಂಗ್ ರಜಪೂತ್ ಅವರ ದುರದೃಷ್ಟಕರ ನಿಧನದ ನಂತರ ಬಾಲಿವುಡ್ನ ಕಾರ್ಯವೈಖರಿಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ.
ನಟ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಗೋಸ್ವಾಮಿ ಬಾಲಿವುಡ್ ಬಗ್ಗೆ ಪ್ರತಿಕ್ರಿಯಿಸಿದ್ದು, ಗೋಸ್ವಾಮಿ ಬಾಲಿವುಡ್ ಅನ್ನು ಕೊಳಕು ಉದ್ಯಮ ಎಂದು ಕರೆಯುವುದನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ ಎಂದು ವರ್ಮಾ ಹೇಳಿದರು.
ಬಾಲಿವುಡ್ ಬಗ್ಗೆ ಗೋಸ್ವಾಮಿ ಅವರ ಕಮೆಂಟ್ಗಳಿಗೆ ಪ್ರತಿಕ್ರಿಯಿಸಿದ ವರ್ಮಾ ಅವರು ಟ್ವೀಟ್ ಮಾಡಿದ್ದು, “# ಅರ್ನಾಬ್ ಗೋಸ್ವಾಮಿ ಬಾಲಿವುಡ್ ಬಗ್ಗೆ ಇಂತಹ ಕೆಟ್ಟದಾದ ರೀತಿಯಲ್ಲಿ ಮಾತನಾಡುತ್ತಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದೇನೆ..ಅವರು ಬಾಲಿವುಡ್ನ್ನು ಕ್ರಿಮಿನಲ್ ಸಂಪರ್ಕ ಹೊಂದಿರುವ ಅತ್ಯಂತ ಕೊಳಕು ಉದ್ಯಮವೆಂದು ಕರೆದಿದ್ದಾರೆ, ಇದು ಅತ್ಯಾಚಾರಿಗಳು, ದರೋಡೆಕೋರರು, ಲೈಂಗಿಕ ಶೋಷಕರನ್ನು ಮಾತ್ರ ಹೊಂದಿದ್ದು ಇನ್ನೇನು ಅಲ್ಲವೇ..?” ಎಂದು ಟ್ವೀಟ್ ಮಾಡಿದ್ದಾರೆ.
ಬಾಲಿವುಡ್ ಮೇಲೆ ಮುಂದುವರಿಯುತ್ತಿರುವ ಅರ್ನಬ್ನ ವಾಗ್ದಾಳಿಯ ಕುರಿತು ಮೌನಮುರಿದು ಪ್ರತಿಕ್ರಿಯೆ ನೀಡಬೇಕೆಂದು ಅವರು ಪ್ರಮುಖ ನಾಯಕರು ಹಾಗೂ ನಿರ್ಮಾಪಕರಿಗೆ ಕರೆ ನೀಡಿದ್ದಾರೆ.
ಓದುಗರೇ , ಸನ್ಮಾರ್ಗ ಫೇಸ್ಬುಕ್ ಪೇಜ್ನ್ನು ಲೈಕ್ ಮಾಡುವ ಮೂಲಕ ನಮ್ಮನ್ನು ಬೆಂಬಲಿಸಿ.












