ಸನ್ಮಾರ್ಗ ವಾರ್ತೆ
ಲಕ್ನೊ,ಸೆ.30: ಉತ್ತರಪ್ರದೇಶದ ಹತ್ರಸ್‍ನಲ್ಲಿ 19 ವರ್ಷದ ಹುಡುಗಿ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿ ಕೊಲೆಯಾದ ಘಟನೆ ತೀವ್ರವಾಗಿರುವಾಗಲೇ ಇನ್ನೊಂದು ಘಟನೆ ಬೆಳಕಿಗೆ ಬಂದಿದೆ. ತಾಯಿಯೊಂದಿಗೆ ಪ್ರಯಾಣಿಸುತ್ತಿದ್ದ ದಲಿತ ಯುವತಿಯನ್ನು ಹತ್ರಸ್‍ನಲ್ಲಿ ಅಪಹರಿಸಿದ ಘಟನೆ ನಡೆದಿದೆ. ಟೆಂಪೊ ಚಾಲಕ ಅಪಹರಣಗೈದಿದ್ದಾನೆಂದು ದೂರು ನೀಡಲಾಗಿದ್ದು, ಸೋಮವಾರ ಘಟನೆ ನಡೆದಿತ್ತು. ಪೊಲೀಸರು ತನಿಖೆ ಮಾಡಿ ಯುವತಿಯನ್ನು ನಂತರ ಪತ್ತೆ ಹಚ್ಚಿದ್ದಾರೆ.
ಯುವತಿ ಮತ್ತು ಆಕೆಯ ತಾಯಿ ಔಷಧ ಖರೀದಿಸಲು ಸದಾಬಾದ್ ನಗರಕ್ಕೆ ಬಂದಿದ್ದರು. ಯುವತಿಯ ತಾಯಿ ನೀರು ತರಲು ಹೊರಗೆ ಹೋದ ವೇಳೆ ಟೆಂಪೊ ಚಾಲಕ ಯುವತಿಯೊಂದಿಗೆ ಹೊರಟು ಹೋಗಿದ್ದನು. ಯುವತಿಯ ಸಂಬಂಧಿಕರ ದೂರಿನಲ್ಲಿ ಪೊಲೀಸರು ಟೆಂಪೊ ಚಾಲಕ ಮತ್ತು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.












